Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಆನಂದ ತೀರ್ಥ purandara vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಆನಂದ ತೀರ್ಥ purandara vittala. Show all posts

Wednesday, 4 December 2019

ಜಯ ಮಂಗಳಂ ನಿತ್ಯ ಶುಭ ಮಂಗಳಂ ಆನಂದ ತೀರ್ಥ purandara vittala

ರಾಗ ಭೈರವಿ ಅಟತಾಳ

ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||
ಮಂಗಳಂ ಆನಂದ ತೀರ್ಥ ಗುರುರಾಯರಿಗೆ
ಮಂಗಳಂ ಮಧುರನುಡಿ ಸಂಭಾಷ್ಯಗೆ
ಮಂಗಳಂ ಮೈಥಿಲಿಗೆ ಅಂಗುಲೀಯನಿತ್ತವಗೆ
ಮಂಗಳಂ ಜಯ ವೀರ ಮಧ್ವಮುನಿಗೆ ||ಅ.ಪ||

ಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆ
ಸಂಜೀವನವ ತಂದ ಹನುಮಂತಗೆ
ಅಂಜದಂತಭಯಕರ ಕಪಿಗಳಿಗೆ ತೋರಿದಗೆ
ಕಂಜಾಕ್ಷರಾಮನ ಭಜಿಸುವವಗೆ ||

ದ್ವಾಪರದಿ ಕುಂತಿಯ ಗರ್ಭದಲಿ ಜನಿಸುತಲಿ
ಪಾಪಿ ದೈತ್ಯರನೆಲ್ಲ ಸೀಳಿದವಗೆ
ದ್ರೌಪದಿಗೆ ಸೌಗಂಧಿಕುಸುಮವ ತಂದವಗೆ
ಶ್ರೀಪತಿಯ ದಾಸ ಭೀಮಸೇನನಿಗೆ ||

ಕಲಿಯುಗದಿ ಸಂಕರನ ದುರ್ಮತವ ಮುರಿದವಗೆ
ಖಳ ಬೌದ್ಧಚಾರ್ವಾಕಮತ ಗೆಲಿದಗೆ
ಒಲಿದು ಸಚ್ಛಾಸ್ತ್ರವನು ಸಾಧುಗಳಿಗೊರೆದವಗೆ
ಸುಲಭ ಪುರಂದರವಿಟ್ಠಲನ ಮಂತ್ರಿಗೆ |
********