Showing posts with label ನರಸಿಂಹಾ ಲಕ್ಷ್ಮೀನರಸಿಂಹ ನಮಿಸುವೆ narasimhavittala. Show all posts
Showing posts with label ನರಸಿಂಹಾ ಲಕ್ಷ್ಮೀನರಸಿಂಹ ನಮಿಸುವೆ narasimhavittala. Show all posts

Tuesday, 3 August 2021

ನರಸಿಂಹಾ ಲಕ್ಷ್ಮೀನರಸಿಂಹ ನಮಿಸುವೆ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ನರಸಿಂಹಾ ಲಕ್ಷ್ಮೀನರಸಿಂಹ ಪ


ನಮಿಸುವೆ ಲಕ್ಷ್ಮೀನರಸಿಂಹ ಅಹಾ ಕನಕಕಶ್ಯಪನಳಿದು

ಜನಕೆ ಸುಖವನಿತ್ತು ಘನಪುರುಷನೆ ಕ್ಷಣ ಕ್ಷಣ ನಮಿಸುವೆ ಅ.ಪ


ಪುಟ್ಟ ಪ್ರಹ್ಲಾದನ ಮೊರೆಯ | ಕೇಳಿ

ಅಟ್ಟಹಾಸದಿ ಕಂಭಸಿಡಿದೂ | ಬಲು

ಸಿಟ್ಟಿನಿಂದಲಿ ಹಲ್ಲು ಕಡಿದೂ | ಅಹಾ

ಕಟ್ಟುಗ್ರತನದ ಕೆಟ್ಟ ಹಿರಣ್ಯನ

ಹೊಟ್ಟೆಯ ಬಗೆದಂಥ ಶ್ರೇಷ್ಠಮಹಿಮನೆ 1


ಕಂಡು ಹಿಡಿದು ಅವನ ರೆಟ್ಟೆ ಎಳೆತಂದೂ

ತೊಡೆಯ ಮೇಲಿಟ್ಟಿ ಬಹು

ಕೆಂಡ ಕೋಪದಿ ಅವನ ಹೊಟ್ಟೆಯಸೀಳಿದ

ಸೊಂಡೂರು ಪುರಮಧ್ಯ ಗುಂಡಿ ನರಸಿಂಹನ

ಕಂಡೆ ಈ ದಿನ 2


ಸೂರಿಗಳರಸ ಒಡೆಯಾ | ಮೋಲೆ

ಸುರಸೋದರರೊಳುಮೆರೆಯ | ಆಹಾ

ಕ್ರೂರ ದೈತ್ಯನ ಕೊರಳಹರಿದ ಅ-

ಪಾರ ಮಹಿಮಸಿರಿವರ ಸಿಂಹವಿಠಲ 3

***