ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ನೋಡು ನಿನ್ನ ಹಿತವಾ ಪ
ಇಂದು ನರದೇಹದಲ್ಲಿ ಬಂದುದೇನೋ | ಒಂದು ಪಥವರಿಯದಾ ಛಂದವೇನೋ ಅ.ಪ
ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ | ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ | ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ | ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು | ಬರಡ ಜನ್ಮ ಮಾಡ ಬ್ಯಾಡಾ 1
ನೀಗಿ ಕೇಳು ಕೇಳು | ಆದಿ ಸನ್ಮಾರ್ಗವ ಕೇಳು ಕೇಳು | ಸಾಧನವ ಬಲಿಯೋ ನೀ | ಕಂದ ಭೂಮಿಯ ಮೇಲೆ ಹನಿ ಮಾಡದೇ 2
ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ| ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ | ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ | ಮರೆಯಬೇಡಾ ಮನವೇ 3
****