..
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ.
ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ.
ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿವನಜಭವಾಂಡ ಪಾತ್ರೆಯನಲ್ಲಿರಿಸಿಗಣನೆಯಿಲ್ಲದ ಜೀವಧ್ಯಾನ ತುಂಬಿರಿಸಿಜನರ ಯೋಗ್ಯತೆ ಉದಕವನಲ್ಲಿ ಬೆರೆಸಿಮಿನುಗುವ ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1
ನಿಲಯಶಯ್ಯ ತಾಂಬೂಲಾಯುಧ ಚೇಲಜಲಜ ಮಂದಾರ ಚಂಪಕ ಮೊಲ್ಲೆ ಬಕುಳತುಲಸಿ ಕೇತಕಿ ದಿವ್ಯಗಂಧ ಪರಿಮಳವಲಯ ಕಿರೀಟಕುಂಡಲ ರತ್ನಮಾಲಾಹೊಳೆವ ಸುನವನವ ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2
ಕಮಲ ಕುಟ್ಮಲರದನದಭಯಸುಪಾಣಿವಿಮಲ ಸುಧಾಕರನಿಭ ಶುಭವದನೆಭ್ರಮರಕುಂತಳೆ ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
***