..
ಪಾಲಿಸು ರವಿತೇಜಾ | ಮಂತ್ರಾಲಯ ಗುರುರಾಜಾ ಪ
ಶ್ರೀ ಸುಖತೀರ್ಥ ಮತಾಂಬುಧಿಗೆ ಭೇಶಾ
ಭಾಸುರ ವರ ವೃಂದಾವನ ನಿವಾಸ
ಭೂಸುರ ಸಂಸೇವಿತ ನತಜನ ಪೋಷಕ ಮುನಿವ್ಯಾಸ 1
ತುಂಗಭದ್ರ ಸುತರಂಗಿಣಿ | ತೀರ ನಿಲಯ
ಸಂಗೀತ ಪ್ರಿಯ ಸತ್ಕವಿಜನಗೇಯ
ತುಂಗ ಮಹಿಮ ಕಮತ ದ್ವಿರದ ಸಿಂಗನೆ ಪಿಡಿಕೈಯ್ಯ 2
ಶಾಮಸುಂದರ ಮೂಲ ಶ್ರೀರಾಮಚಂದ್ರನ ಚರಣಾ
ತಾಮರಸ ಯುಗ್ಮಂಗಳಿಗೆ ಷಟ್ ಚರಣ
ಕಾಮಿತ ಶುಭದಾಯಕ ನಿನ್ಸೀಮ ಕರುಣ ಭರಣ 3
***