..
Kruti by ವೆಂಕಟದಾಸರು Venkatadasaru
ತಪ್ಪು ತಪ್ಪು ತಪ್ಪು ತಪ್ಪಪರಾಧ ಕೋಟಿಯಸರ್ವಂ ತಪ್ಪನ್ನೆಲ್ಲಾ ಕ್ಷ'ುಸಿ ಒಪ್ಪಿಕೊಳ್ಳಯ್ಯ ಗುರುವೆ ಪ
ದೇಹ ತನ್ನದೆಂಬ ಅಹಂಕಾರದ ತಪ್ಪು ತನ್ನಗೇಹ ಸತಿಸುತರ ಮಮತೆ ಪಾಶದ ತಪ್ಪುಮೋಹ ಮದ ಮಾತ್ಸರ್ಯವ ಭ್ರಮೆಗೊಂಬೊ ತಪ್ಪುಓಹೋ! ವ್ಯರ್ಥಕಾಲವ ಕಳೆದೆನಹುದಯ್ಯ 1
ಬಕವೃತ್ತಿಯ ಸೇಮೆಂದ ಮುಕುತನೆಂಬೆನೋ ಹರಿ'ಕಳಮತಿಗಳ ಕೂಡಿ ಯೋಗ್ಯನೆಂಬೆನೋಸಕಲ 'ಷಯಸುಖವನುಂಡು ವೈರಾಗಿಯೆಂಬೆನೋ ಹರಿಭಕ್ತರ ಸಂಗವ ಬಿಟ್ಟು ಜ್ಞಾನಿಯೆಂಬೆನೋ 2
ಬರಿಯ ಬ್ರಹ್ಮಜ್ಞಾನದಿಂದ ಮರುಳು ಮಾಡಿದೆಪರಿಪರಿಯ ಭಾವಭೇದಗಳನು ತೋರಿದೆಅರಿಯದ್ಹೋದೆನಯ್ಯ ಶ್ರೀಮದ್ಗುರುವೆ ವಾಸುದೇವಾರ್ಯ ನರಸಾರ್ಯ ಅಮರಗಿರಿನಿಲಯ ಸಕಲ ತಪ್ಪು ಮರೆಯಯ್ಯಾ 3
***