ಸಾರಂಗ ರಾಗ ದೀಪಚಂದಿ ತಾಳ
ಬಿರುದು ದಾರದು ಗೋವಿಂದಾ
ಅರಿತು ನೋಡಯ್ಯಾ ಶ್ರೀ ಹರಿಮುಕುಂದಾ ||ಪ||
ಪತಿಯಾ ಕಣ್ಣಿನ ಮುಂದೆಳೆಯಲು ಸತಿಯಾ
ಗತಿಗಾತಿಹುದು ದಾರಿಗೆ ಕೊರತಿಯಾ ||೧||
ಒಡೆಯನಾ ಮುಂದ ಬಂಟಗಾಗಿರೆ ಕುಂದು
ಒಡನೆ ಬೀಳುದು ತೊಡಕಾರಿಗೆ ಬಂದು ||೨||
ನಿನ್ನವನೆನಿಸಿ ಮಹಿಪತಿಗೆ ಪೂರ್ಣಾ
ಇನ್ನಾರಿಸುವರೆ ಎನ್ನವಗುಣಾ ||೩||
*******
ಬಿರುದು ದಾರದು ಗೋವಿಂದಾ
ಅರಿತು ನೋಡಯ್ಯಾ ಶ್ರೀ ಹರಿಮುಕುಂದಾ ||ಪ||
ಪತಿಯಾ ಕಣ್ಣಿನ ಮುಂದೆಳೆಯಲು ಸತಿಯಾ
ಗತಿಗಾತಿಹುದು ದಾರಿಗೆ ಕೊರತಿಯಾ ||೧||
ಒಡೆಯನಾ ಮುಂದ ಬಂಟಗಾಗಿರೆ ಕುಂದು
ಒಡನೆ ಬೀಳುದು ತೊಡಕಾರಿಗೆ ಬಂದು ||೨||
ನಿನ್ನವನೆನಿಸಿ ಮಹಿಪತಿಗೆ ಪೂರ್ಣಾ
ಇನ್ನಾರಿಸುವರೆ ಎನ್ನವಗುಣಾ ||೩||
*******