by vidya prasannateertha
ವಿದ್ಯಾಪ್ರಸನ್ನತೀರ್ಥರು
ಆಟವನಾಡುವ ಬಾರೋ ಶ್ರೀ ಕೃಷ್ಣ ಪ
ನೋಟಕೆ ಜನಗಳ ಕೂಟವು ಕಾದಿದೆ ಅ.ಪ
ದೊರೆಯು ನೀನಂತೆ ದೊರೆಯು ವಾಸಿಸಲು
ಅರಮನೆ ಎಂದಿದನರಿಯಬೇಕಂತೆ
ಪರಿಪರಿಯಲಿ ನಿನ್ನ ಸೇವೆಯು ಮಾಡಲು
ಪರಿಚಾರಕ ನಾನಿರಬೇಕಂತೆ 1
ತಂದೆಯು ನೀನಂತೆ ತಾಯಿ ರುಕ್ಮಿಣಿಯಂತೆ
ಮಂದಿಗಳೆಲ್ಲರು ಮಕ್ಕಳು ನಿನಗಂತೆ
ಮುಂದೆ ಎಮಗೆ ನಿನ್ನ ದಿವ್ಯ ರಾಜ್ಯದಲಿ
ಒಂದೊಂದು ಭಾಗವ ಬರೆದಿಡಬೇಕಂತೆ 2
ಬಿಂಬವು ನೀನಂತೆ ಕನ್ನಡಿಯೊಳು ಪ್ರತಿ
ಯೋಗಿ ಪ್ರಸನ್ನ
ಬಿಂಬದಿ ಬಿಂಬವ ನೋಡುವೆನಂತೆ 3
***********