ಸ್ವರ್ಣಗೌರಿ ಆರುತಿಹಾಡು
ಆರುತೀಯ ಮಾಡುವೇವು ಸ್ವರ್ಣಗೌರಿಗೆ
ಸಾರಸಾಕ್ಷಿಯೆ ರು ಸೇರಿ ಸರಸದಿಂದ ಹಾಡುತಾ||ಪಲ್ಲ||
ಭಾದ್ರಪದ ಮಾಸದ ಶುಧ್ಧ ತದಿಗಿ ದಿನದಲಿ
ಶುಧ್ಧ ,ಭಕ್ತಿಯಿಂದಗೌರಿ ದೇವಿಯನ್ನ ಪೂಜಿಸಿ||೧||
ಸೂತರು ಶೌನಕಾದಿಗಳಿಗೆ ಪೇಳಿದಂಥ ವ್ರತವಿದು
ಪಾರ್ವತಿಯು ಮಾಡಿ ಶಿವನ ಪತಿಯಾಗಿ ಪಡೆದಳು||೨||
ಹೋಳಿಗಿ ಪಾಯಸಂಬೋಡೆ ಚಿತ್ರಾನ್ನನಿವೇದಿಸಿ
ಮಧ್ವೇಶಕೃಷ್ಣ ನ ಮನದಿ ನೆನೆದು ಮಾಡಿದರು ಆರುತಿ||೩||
ankita ಮಧ್ವೇಶಕೃಷ್ಣ.
***