Showing posts with label ಪರಮ ಪುರುಷ ನೀ ನೆಲ್ಲಿಕಾಯಿ neleyadikeshava ಮುಂಡಿಗೆ PARAMA PURUSHA NELLIKAYI mundige. Show all posts
Showing posts with label ಪರಮ ಪುರುಷ ನೀ ನೆಲ್ಲಿಕಾಯಿ neleyadikeshava ಮುಂಡಿಗೆ PARAMA PURUSHA NELLIKAYI mundige. Show all posts

Saturday, 20 February 2021

ಪರಮ ಪುರುಷ ನೀ ನೆಲ್ಲಿಕಾಯಿ ankita neleyadikeshava ಮುಂಡಿಗೆ PARAMA PURUSHA NELLIKAYI mundige

ರಾಗ ಮಧ್ಯಮಾವತಿ ತಾಳ ಆದಿ




raga maand

 


ತರಕಾರಿ ಮುಂಡಿಗೆ

ಪರಮ ಪುರುಷ ನೀ ನೆಲ್ಲಿಕಾಯಿ

ಸರಸಿಯೊಳಗೆ ಕರಿ ಕೂಗಿರೆಕಾಯಿ।।

ಹಿರಿದು ಮಾಡಿದ ಪಾಪ ನುಗ್ಗೆಕಾಯಿ

ಹರಿ ನಿನ್ನ ಜ್ಞಾನ ಬಾಳೆಕಾಯಿ ||


ಕರಿರಾಜಗೊಲಿದಂತ ಬದನೆಕಾಯಿ

ಅರಿಷಡ್ವರ್ಗದಿ ಒದಗಲಿ ಕಾಯಿ

ಕ್ರೂರ ವ್ಯಾಧಿಗಳೆಲ್ಲಾ ಹೀರೇಕಾಯಿ

ಘೋರ ದುಷ್ಕ್ರತ್ಯಗಳ ತೋರೇ ಕಾಯಿ ||2||


ಭಾರತದ ಕಥೆ ಕರ್ಣ ತುಮಬಿದೆ ಕಾಯಿ

ವಾರಿಜಾಕ್ಷನೆ ಗತಿ ಎಂದಿಪ್ಪೆಕಾಯಿ

ಮುರಹರ ನಿನ್ನನರಿದವರೇ ಕಾಯಿ

ಗುರು ಕರುಣಾಮೃತ ಹುಣಿಸೇ ಕಾಯಿ ||3||


check

ಊರಗಾಧಿಪತಿ ಎಂಬ ಹೆಸರಿನ ಕಾಯಿ

ಬಾಡದಾದಿ ಕೇಶವ ನಿನ್ನ ಮೆತ್ತಿದ ಕಾಯಿ.


......

rendered by

shrI Ananda rAo, srIrangam

to aid learning the dAsara pada for beginners


Lyrics:


rAga: madhyamAvati

tALa: Adi


parama puruSha nI nellikkAyi 

sarasiyoLage kari kUgire kAyi ||


hiridu mADida pApa nugge kAyi

hari ninna dhyAna bALe kAyi

karirAjag golidantha badane kAyi

ariShad vargadi odagili kAyi || 1


parama puruSha nI nellikkAyi 

sarasiyoLage kari kUgire kAyi ||


krUra vyAdhigaLellA hIre kAyi

ghOra dushkRtagaLa tOre kAyi

bhArata kathe karNa tumbide kAyi

vArijAkShane gatiyendippe kAyi ||2


parama puruSha nI nellikkAyi 

sarasiyoLage kari kUgire kAyi ||


murahara ninnavaravarE kAyi

guru karuNAmRta uNise kAyi

UragAdhi patiyemba hesarina kAyi

baDadAdi kEshava ninna mettida kAyi ||3


parama puruSha nI nellikkAyi 

sarasiyoLage kari kUgire kAyi ||


Using mostly ITRANS transliteration scheme to help correct pronunciation.

**********


meaning/explanation of this mundige ಮುಂಡಿಗೆ

ಪರಮ ಪುರುಷ ನೀ ನೆಲ್ಲಿಕಾಯಿ

ಸರಸಿಯೊಳಗೆ ಕರಿ ಕೂಗಿರೆಕಾಯಿ

ಹಿರಿದು ಮಾಡಿದ ಪಾಪ ನುಗ್ಗೆಕಾಯಿ

ಹರಿ ನಿನ್ನ ಜ್ಞಾನ ಬಾಳೆಕಾಯಿ ||

ಅರ್ಥ : ಪರಮ ಪುರುಷ ನೀನು ಸರ್ವತ್ರ ಕಾಯಬೇಕು. ಸರಸಿಯೊಳಗೆ ಮೊಸಳೆಯು ತನ್ನನ್ನು ಎಳೆಯುತ್ತಿರುವಾಗ,

" ನಾರಾಯಣ ಅಖಿಲ ಗುರೋ ಭಗವನ್ನಮಸ್ತೇ " ಎಂದಾಕ್ಷಣ ಬಂದು ನಕ್ರನನ್ನು ಸೀಳಿ ಗಜೇಂದ್ರನನ್ನು ರಕ್ಷಿಸಿದಂತೆ ನನ್ನನ್ನು ರಕ್ಷಿಸು.

ಹಿಂದೆ ಮಾಡಿದ ಪಾಪ ಕರ್ಮದ ಫಲವು ಈ ಜನ್ಮದಲ್ಲಿ ರೋಗಾದಿ ರೂಪಗಳಿಂದ ನುಗ್ಗಿ ಬರುತ್ತಿರಲು ನೀನೇ ಕಾಯಿ  ನಿನ್ನ ಜ್ಞಾನ ನಿರಂತರವಾಗಿ ನನ್ನಲಿ ಬಾಳುವಂತೆ ಕಾಯಿ.

ಊರಗಾಧಿಪತಿ ಎಂಬ ಹೆಸರಿನ ಕಾಯಿ

ಬಾಡದಾದಿ ಕೇಶವ ನಿನ್ನ ಮೆತ್ತಿದ ಕಾಯಿ.

ಅರ್ಥ : ಉರಗಾಧಿ ಪತಿಯಾದ ಕಾಳಿಯನ ಅಹಂಕಾರವನು ಹೋಗಲಾಡಿಸಿ, ನಿನ್ನ ಉರಸ್ಸಿನಲ್ಲಿ ವಾಸಿಸುವದರಿಂದ ಉರಗಾ ಎಂದೆನಿಸಿದ ಲಕ್ಷ್ಮೀದೇವಿಗೆ ಅಧಿಪತಿಯಾದ ನೀನು ನನ್ನನ್ನು ರಕ್ಷಿಸು.

ಕೃತಿ - ಕನಕದಾಸರು.

********