ಪರಮ ಪುರುಷ ನೀ ನೆಲ್ಲಿಕಾಯಿ
ಸರಸಿಯೊಳಗೆ ಕರಿ ಕೂಗಿರೆಕಾಯಿ।।
ಹಿರಿದು ಮಾಡಿದ ಪಾಪ ನುಗ್ಗೆಕಾಯಿ
ಹರಿ ನಿನ್ನ ಜ್ಞಾನ ಬಾಳೆಕಾಯಿ ||
ಕರಿರಾಜಗೊಲಿದಂತ ಬದನೆಕಾಯಿ
ಅರಿಷಡ್ವರ್ಗದಿ ಒದಗಲಿ ಕಾಯಿ
ಕ್ರೂರ ವ್ಯಾಧಿಗಳೆಲ್ಲಾ ಹೀರೇಕಾಯಿ
ಘೋರ ದುಷ್ಕ್ರತ್ಯಗಳ ತೋರೇ ಕಾಯಿ ||2||
ಭಾರತದ ಕಥೆ ಕರ್ಣ ತುಮಬಿದೆ ಕಾಯಿ
ವಾರಿಜಾಕ್ಷನೆ ಗತಿ ಎಂದಿಪ್ಪೆಕಾಯಿ
ಮುರಹರ ನಿನ್ನನರಿದವರೇ ಕಾಯಿ
ಗುರು ಕರುಣಾಮೃತ ಹುಣಿಸೇ ಕಾಯಿ ||3||
check
ಊರಗಾಧಿಪತಿ ಎಂಬ ಹೆಸರಿನ ಕಾಯಿ
ಬಾಡದಾದಿ ಕೇಶವ ನಿನ್ನ ಮೆತ್ತಿದ ಕಾಯಿ.
......
rendered by
shrI Ananda rAo, srIrangam
to aid learning the dAsara pada for beginners
Lyrics:
rAga: madhyamAvati
tALa: Adi
parama puruSha nI nellikkAyi
sarasiyoLage kari kUgire kAyi ||
hiridu mADida pApa nugge kAyi
hari ninna dhyAna bALe kAyi
karirAjag golidantha badane kAyi
ariShad vargadi odagili kAyi || 1
parama puruSha nI nellikkAyi
sarasiyoLage kari kUgire kAyi ||
krUra vyAdhigaLellA hIre kAyi
ghOra dushkRtagaLa tOre kAyi
bhArata kathe karNa tumbide kAyi
vArijAkShane gatiyendippe kAyi ||2
parama puruSha nI nellikkAyi
sarasiyoLage kari kUgire kAyi ||
murahara ninnavaravarE kAyi
guru karuNAmRta uNise kAyi
UragAdhi patiyemba hesarina kAyi
baDadAdi kEshava ninna mettida kAyi ||3
parama puruSha nI nellikkAyi
sarasiyoLage kari kUgire kAyi ||
Using mostly ITRANS transliteration scheme to help correct pronunciation.
**********
meaning/explanation of this mundige ಮುಂಡಿಗೆ
ಪರಮ ಪುರುಷ ನೀ ನೆಲ್ಲಿಕಾಯಿ
ಸರಸಿಯೊಳಗೆ ಕರಿ ಕೂಗಿರೆಕಾಯಿ
ಹಿರಿದು ಮಾಡಿದ ಪಾಪ ನುಗ್ಗೆಕಾಯಿ
ಹರಿ ನಿನ್ನ ಜ್ಞಾನ ಬಾಳೆಕಾಯಿ ||
ಅರ್ಥ : ಪರಮ ಪುರುಷ ನೀನು ಸರ್ವತ್ರ ಕಾಯಬೇಕು. ಸರಸಿಯೊಳಗೆ ಮೊಸಳೆಯು ತನ್ನನ್ನು ಎಳೆಯುತ್ತಿರುವಾಗ,
" ನಾರಾಯಣ ಅಖಿಲ ಗುರೋ ಭಗವನ್ನಮಸ್ತೇ " ಎಂದಾಕ್ಷಣ ಬಂದು ನಕ್ರನನ್ನು ಸೀಳಿ ಗಜೇಂದ್ರನನ್ನು ರಕ್ಷಿಸಿದಂತೆ ನನ್ನನ್ನು ರಕ್ಷಿಸು.
ಹಿಂದೆ ಮಾಡಿದ ಪಾಪ ಕರ್ಮದ ಫಲವು ಈ ಜನ್ಮದಲ್ಲಿ ರೋಗಾದಿ ರೂಪಗಳಿಂದ ನುಗ್ಗಿ ಬರುತ್ತಿರಲು ನೀನೇ ಕಾಯಿ ನಿನ್ನ ಜ್ಞಾನ ನಿರಂತರವಾಗಿ ನನ್ನಲಿ ಬಾಳುವಂತೆ ಕಾಯಿ.
ಊರಗಾಧಿಪತಿ ಎಂಬ ಹೆಸರಿನ ಕಾಯಿ
ಬಾಡದಾದಿ ಕೇಶವ ನಿನ್ನ ಮೆತ್ತಿದ ಕಾಯಿ.
ಅರ್ಥ : ಉರಗಾಧಿ ಪತಿಯಾದ ಕಾಳಿಯನ ಅಹಂಕಾರವನು ಹೋಗಲಾಡಿಸಿ, ನಿನ್ನ ಉರಸ್ಸಿನಲ್ಲಿ ವಾಸಿಸುವದರಿಂದ ಉರಗಾ ಎಂದೆನಿಸಿದ ಲಕ್ಷ್ಮೀದೇವಿಗೆ ಅಧಿಪತಿಯಾದ ನೀನು ನನ್ನನ್ನು ರಕ್ಷಿಸು.
ಕೃತಿ - ಕನಕದಾಸರು.
********
No comments:
Post a Comment