ನೋಡಿದೆ ಹರನಾ ನೋಡಿದೆ ಪ.
ಹರನ ಕೊಂಡಾಡಿದೆ ಪಾದಪಾವನ್ನ ರೂಢಿಯೊಳಗೆ ಇಂಥಾ
ಈಡಿಲ್ಲ ಶಿವನಾ ಜೋಡಿಶಿರವ ಬಾಗುವೆನಾ ಶಿರವಾ ಅ.ಪ.
ಶುಕ ದೂರ್ವಾಸ ರೂಪದ ರುದ್ರಾ ನೀನು
ಅವತಾರ ತಾಳಿದ್ಯೊ ವೀರಭದಾ
ಮಥನವಾ ಮಾಡಲು ಸಮುದ್ರಾ
ನೀನು ವಿಷಪಾನ ಮಾಡಿದ್ಯೊ ಆದ್ರ್ರಾ || ಆಹಾ||
ನೀಲಕಂಠನಾಮವು ಬಂದವು
ನಿನ್ನ ನೋಡುವರ ಮನಕೆ ಆನಂದವ ಕೊಡುವುದು ಜಗಕೆ 1
ಕರದಲಿ ಡಮರು ತ್ರಿಶೂಲಗಳಿಂದಾ
ನೀನು ಶೋಭಿಪಿಯೋ ಬಲುಛಂದಾ
ಗಳದಲ್ಲಿ ದ್ರಾಕ್ಷಾಮಾಲೆಗಳಿಂದಾ
ನಾಗಭೂಷಣಾಯಿಂದಾ || ಆಹಾ||
ಶಿರದಾ ಜಡಿಯೋಳು ಗಂಗಿಯ ಧರಿಸಿದ
ಧೀರನು ಹರಿಯಾ ರೂಪಕೆ ಮರುಳಾದ ಶಂಕರನ 2
ಕೈಲಾಸಪುರಧೀಶ ವಾಸಾ
ನೀನು ಸರ್ವರಮನಕೆ ಉಲ್ಲಾಸ
ನೀನು ಸತಿಗೆ ತಾರಕ ಮಂಗಳ ಉಪದೇಶಾ
ಸ್ಮಶಾನವನು ಕಾಯ್ದ ಹರಿದಾಸಾ || ಆಹಾ||
ನಂದಿವಾಹನನಾಗಿ ಆನಂದಾದಿ ಮೆರೆಯುವ
ಸಿಂಧುಶಯನನ ಕಾಳಿಮರ್ಧನಕೃಷ್ಣನ ತಂದು ತೋರಿಸುವನ 3
****