Showing posts with label ಸ್ಮರಿಸು ಸ್ಮರಿಸು ಮನವೇ ಗುರುರಾಯರ narahari P satyajnana teertha stutih. Show all posts
Showing posts with label ಸ್ಮರಿಸು ಸ್ಮರಿಸು ಮನವೇ ಗುರುರಾಯರ narahari P satyajnana teertha stutih. Show all posts

Thursday, 5 August 2021

ಸ್ಮರಿಸು ಸ್ಮರಿಸು ಮನವೇ ಗುರುರಾಯರ ankita narahari P satyajnana teertha stutih

 ..

ruti by pradyumna teertha ಪ್ರದ್ಯುಮ್ನತೀರ್ಥರು

ಸ್ಮರಿಸು ಸ್ಮರಿಸು ಮನವೇ ಗುರುರಾಯರ ಪ


ಸ್ಮರಿಸು ಸ್ಮರಿಸು ಬಿಡದೆ ಸ್ಮರಿಸು ನೀ ಗುರು ಸತ್ಯ

ಜ್ಞಾನತೀರ್ಥರ ಪದವ ಸಾರುವೆ

ಬೇಡಿದ್ದು ಕೊಡುವೆನೆಂಬುವರನು ಅ.ಪ

ಸಂಶಯ ಪಡಬ್ಯಾಡವೋ ಇದಕೆ ನಾ ನಿ

ಸ್ಸಂಶಯದಿಂದ ಪೇಳುವೆ

ಸಂಶಯಾತಕೆ ಋಷಿ ವಂಶೀಕ ರಾವಣನ

ಧ್ವಂಸ ಮಾಡಿದ ರಾಮನ ಸಂಸೇವಿಪರÀ ನೀ 1

ಶಾಪಾನುಗ್ರಹ ಶಕ್ತರೂ ಇವರು

ಕಾಮಕ್ರೋಧವ ಬಿಟ್ಟವರೂ

ತಾಪತ್ರಯಗಳಳಿದು ಪಾಪಗಳೋಡಿಸಿ

ಕಾಪಾಡುವೆನೆಂದು ಜಗದಿ ಮೆರೆದವರ 2

ಗುರುಕರುಣಾಬಲದಿ ಶ್ರೀಹರಿನಪರೋಕ್ಷಿಗೈಸಿದ

ಧೀರರ ದುರ್ವಾದಿಗಳ ಮುರಿದು ಗುರು ಮಧ್ವರಾಯರ

ಪರಮ ಪ್ರೀತಿಯ ಪಡೆದ ನರಹರಿ ಪ್ರಿಯರ 3

***