..
ruti by pradyumna teertha ಪ್ರದ್ಯುಮ್ನತೀರ್ಥರು
ಸ್ಮರಿಸು ಸ್ಮರಿಸು ಮನವೇ ಗುರುರಾಯರ ಪ
ಸ್ಮರಿಸು ಸ್ಮರಿಸು ಬಿಡದೆ ಸ್ಮರಿಸು ನೀ ಗುರು ಸತ್ಯ
ಜ್ಞಾನತೀರ್ಥರ ಪದವ ಸಾರುವೆ
ಬೇಡಿದ್ದು ಕೊಡುವೆನೆಂಬುವರನು ಅ.ಪ
ಸಂಶಯ ಪಡಬ್ಯಾಡವೋ ಇದಕೆ ನಾ ನಿ
ಸ್ಸಂಶಯದಿಂದ ಪೇಳುವೆ
ಸಂಶಯಾತಕೆ ಋಷಿ ವಂಶೀಕ ರಾವಣನ
ಧ್ವಂಸ ಮಾಡಿದ ರಾಮನ ಸಂಸೇವಿಪರÀ ನೀ 1
ಶಾಪಾನುಗ್ರಹ ಶಕ್ತರೂ ಇವರು
ಕಾಮಕ್ರೋಧವ ಬಿಟ್ಟವರೂ
ತಾಪತ್ರಯಗಳಳಿದು ಪಾಪಗಳೋಡಿಸಿ
ಕಾಪಾಡುವೆನೆಂದು ಜಗದಿ ಮೆರೆದವರ 2
ಗುರುಕರುಣಾಬಲದಿ ಶ್ರೀಹರಿನಪರೋಕ್ಷಿಗೈಸಿದ
ಧೀರರ ದುರ್ವಾದಿಗಳ ಮುರಿದು ಗುರು ಮಧ್ವರಾಯರ
ಪರಮ ಪ್ರೀತಿಯ ಪಡೆದ ನರಹರಿ ಪ್ರಿಯರ 3
***
No comments:
Post a Comment