ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಳಗುವ ಬನ್ನಿ ಮಂಗಳಾರತಿಯ ಹೊಳೆಯುವ ಶ್ರೀ ಗುರುಮೂರುತಿಯ ಪ
ಮಂಗಳಸ್ವರದಲಾರತಿ ಮಾಡುವ ಕಂಗಳಲಿ ಕಂಡು ಸ್ವಾಮಿ ನಲಿದಾಡುವ ಸಂಗಸುಖದ ಸವಿ ಸೂರ್ಯಾಡುವ ಮಂಗಳೋಚ್ಚ್ರಾಯವ ಕೊಂಡಾಡುವ 1
ಪಾಡುವ ಬನ್ನಿ ನಾಮಗಾಯನ ಬೇಡುವದಿದೇ ಸುಖಸಾಧನವ ನೀಡುತಲಿಹ ನಿಜನಿಧಾನವ ಪಡೆವದಿದೊಂದು ಮುಖ್ಯ ಕಾರಣ 2
ಬಿಡದೆ ಕೊಂಡಾಡುವ ಕೀರುತಿಯ ಪೊಡವಿಯೊಳು ಪಾಂಡವ ಸಾರಥಿಯ ಮಾಡುವ ಬನ್ನಿ ಸೇವೆ ಶ್ರೀಪತಿಯ ಒಡಿಯನಹುದೆಂದು ನೀ ಮಹಿಪತಿಯ 3
***