Showing posts with label ನೀ ನೋಡುವುದುಚಿತಲ್ಲೊ ಕೃಷ್ಣಯ್ಯ prasannavenkata. Show all posts
Showing posts with label ನೀ ನೋಡುವುದುಚಿತಲ್ಲೊ ಕೃಷ್ಣಯ್ಯ prasannavenkata. Show all posts

Wednesday, 13 November 2019

ನೀ ನೋಡುವುದುಚಿತಲ್ಲೊ ಕೃಷ್ಣಯ್ಯ ankita prasannavenkata

by ಪ್ರಸನ್ನವೆಂಕಟದಾಸರು
ನೀನೋಡುವುದುಚಿತಲ್ಲೊ ಕೃಷ್ಣಯ್ಯನಾನಾ ದುಃಖವನುಂಡು ದಣಿದೆ ನಮ್ಮಯ್ಯ ಪ.

ಮಜ್ಜ ಮಾಂಸರುಧಿರಮಲಮೂತ್ರಮಜ್ಜನಮಾಡುತ ಬಸಿರೊಳಗೆಜರ್ಜರಿತನಾದೆ ಲೆಕ್ಕವಿಲ್ಲದಕೆ ಪಾದಾಬ್ಜವನೆಂದು ತೋರಿಸುವಿಯೊ ರಂಗ 1

ಎರವುತಂದಿರುವ ಸಂಸಾರದ ಸುಖದೊಳುಉರಿ ಮೂರು ಬೆರಸಾಡಿ ದಹಿಸುತಿದೆತರಳಯೌವನ ಮುಪ್ಪಿಲ್ಯಾರೊಮ್ಮೆ ಚಿತ್ತವುಸ್ಥಿರವಾಗದಿನ್ನೇನುಗತಿಚಿಂತಿಸೈದೆ2

ಯಮಭಂಟರುಪಟಳ ನಿನ್ನವರಾದರೆಕ್ರಮವಲ್ಲ ಆನತ ಜನರ ದಾತಾರಭ್ರಮಿಸಲಾರೆನು ಕರುಣಿಸು ಕರುಣಾಂಬುಧಿರಮೆಯ ರಮಣ ಪ್ರಸನ್ವೆಂಕಟ ಧೀರ 3
*******