Showing posts with label ಳಳ- RSS- ಯುವಮನದೊಳಿಂದು ಸೀಮೋಲ್ಲಂಘನದ YUVAMANADOLINDU SEEMOLLANGHANADA others rss. Show all posts
Showing posts with label ಳಳ- RSS- ಯುವಮನದೊಳಿಂದು ಸೀಮೋಲ್ಲಂಘನದ YUVAMANADOLINDU SEEMOLLANGHANADA others rss. Show all posts

Friday, 24 December 2021

ಯುವಮನದೊಳಿಂದು ಸೀಮೋಲ್ಲಂಘನದ YUVAMANADOLINDU SEEMOLLANGHANADA others rss



 RSS song  


ಯುವಮನದೊಳಿಂದು ಸೀಮೋಲ್ಲಂಘನದ ತವಕ

ದುರುಳರೆದೆಯಲಿ ನಡುಕ ಧರೆಗೆ ಪುಳಕ

ನಿಲ್ಲದೀ ಅಭಿಸರಣ ಗೆಲ್ಲುವನಕ

ಪರಮವೈಭವ ತಾಯ್ಗೆ ಸಲ್ಲುವನಕ       ||ಪ||


ಪ್ರಾಚೀನ ಸಂಸ್ಕೃತಿಯ ನವನವೋನ್ಮೇಷದಲಿ

ಕರಕಗುತಿದೆ ಕೀಳರಿಮೆ ಸ್ವಾರ್ಥ ಮೋಹ

ಹಿಂದುತ್ವದೊಸಗೆಯಲಿ ಬಂಧುತ್ವ ಬೆಸುಗೆಯಲಿ

ದೀಪ್ತಗೊಳುತಿದೆ ಮನದಿ ರಾಷ್ಟ್ರಭಾವ   ||೧||


ಬಾಹುಬಲ ಧೀಃಶಕ್ತಿ ಸಿರಿಸಮೃದ್ಧಿಗೆ ರಕ್ಷೆ

ಸಜ್ಜನರ ಶ್ರೀರಕ್ಷೆ ಸಂಘಶಕ್ತಿ

ಬರಿ ದಿಧೀವಿಷೆಯಲ್ಲ ಹಿಂದು ಸತ್ವೋನ್ನತಿಯು

ಜಗಕೆ ಮಂಗಳವೀವ ಪುಣ್ಯಕೀರ್ತಿ  ||೨||


ಚರಿತೆದಿಶೆ ಹೊರಳುತಿದೆ ಸುಮುಹೂರ್ತ ಸಮನಿಸಿದೆ

ತಾಯಿ ಭಾರತಿಗಿಂದು ಲಕ್ಷಾರ್ಚನೆ

ಬೆವರು ನೆತ್ತರು ಹರಿಸಿ ಜೀವಭಾವವ ಬೆರೆಸಿ

ಧ್ಯೇಯ ಸಿಂಚಿತ ಹೃದಯ ಪುಷ್ಪಾರ್ಚನೆ ||೩||

***