Showing posts with label ನಾರಾಯಣನಲ್ಲದಿಲ್ಲ ಜಗದಿ ನಾರಾಯಣನೆ ವಾರಿಶಾಯಿಯಾದ raghurama vittala. Show all posts
Showing posts with label ನಾರಾಯಣನಲ್ಲದಿಲ್ಲ ಜಗದಿ ನಾರಾಯಣನೆ ವಾರಿಶಾಯಿಯಾದ raghurama vittala. Show all posts

Thursday, 5 August 2021

ನಾರಾಯಣನಲ್ಲದಿಲ್ಲ ಜಗದಿ ನಾರಾಯಣನೆ ವಾರಿಶಾಯಿಯಾದ ankita raghurama vittala

   ..

ನಾರಾಯಣನಲ್ಲದಿಲ್ಲ ಜಗದಿ ಪ


ನಾರಾಯಣನೆ ವಾರಿಶಾಯಿಯಾದ ಮೇಲೆ

ವಾರಿಸಂಪರ್ಕವಿಲ್ಲದ ವಸ್ತುವುಂಟೆಅ.ಪ


ತೃಣ ಲತೆ ತರು ವನಸ್ಪತಿ ಸಂತತಿಯೊಳೆಲ್ಲ

ಗಣನೆಯಿಲ್ಲದ ಪ್ರಾಣಿವರ್ಗದೊಳೆಲ್ಲ

ಅಣುಮಹತ್ತೆನಿಪ ಚರಾಚರಗಳೊಳೆಲ್ಲ

ಅಣಗಿ ಪೋಷಿಪ ರಸ ವಾರಿಯಾದ ಮೇಲೆ 1

ಧರೆಯೊಳಗಡಗಿಹ ಧಾತುಜಾಲವ ಕರಗಿಸಿ

ನೆರೆ ವನಸ್ಪತಿವರ್ಗಕೆ ಉಣಿಸನಿತ್ತು

ಪರಿ ಪರಿ ಧಾನ್ಯ ಫಲಂಗಳ ರಚಿಸುತ್ತ

ಹರಹಿ ಲೋಕದೊಳೆಲ್ಲರನು ಪೋಷಿಪ ಪ್ರಭು 2

ಒಂದೇ ಸ್ಥಳದಲಿ ಮೊಳೆತು ಬೆಳೆವ ಬೀಜಕ್ಕೆಲ್ಲ

ಒಂದೇ ವಾಸನೆ ಗುಣ ರುಚಿಗಳುಂಟೇ

ಸಂದೇಹ ಬೇಡ ನಿರ್ಲಿಪ್ತ ತಾನವುಗಳ

ಕುಂದಿಸದೆ ಗುಣ ಸ್ವಭಾವಗಳ ಪೋಷಿಸುವ 3

ಸರ್ವವಸ್ತುಗಳಲ್ಲು ಅಂತರ್ಯಾಮಿಯಾಗಿ

ಸರ್ವ ಚರಾಚರಕೆ ನಿಯಾಮಕನಾಗಿ

ಸರ್ವರೊಳಡಗಿ ಪೋಷಿಪ ಘನಪ್ರಭುವಾಗಿ

ಸರ್ವರುತ್ಪತ್ತಿ ಸ್ಥಿತಿಗೆ ಕಾರಣನಹ 4

ಪರಮಪುರುಷ ತನ್ನನಂತ ಮಹಿಮೆಯೊಳು

ಕಿರಿದೊಂದಂಶದಿ ವಾರಿರೂಪದೊಳಿಂತು

ಸರುವ ಚರಾಚರದಿರುತಂತರ್ಗತನಾಗಿಪೊರೆವ ಜನವ ರಘುರಾಮವಿಠಲ ಪ್ರಭು 5

****