..
ನಾರಾಯಣನಲ್ಲದಿಲ್ಲ ಜಗದಿ ಪ
ನಾರಾಯಣನೆ ವಾರಿಶಾಯಿಯಾದ ಮೇಲೆ
ವಾರಿಸಂಪರ್ಕವಿಲ್ಲದ ವಸ್ತುವುಂಟೆಅ.ಪ
ತೃಣ ಲತೆ ತರು ವನಸ್ಪತಿ ಸಂತತಿಯೊಳೆಲ್ಲ
ಗಣನೆಯಿಲ್ಲದ ಪ್ರಾಣಿವರ್ಗದೊಳೆಲ್ಲ
ಅಣುಮಹತ್ತೆನಿಪ ಚರಾಚರಗಳೊಳೆಲ್ಲ
ಅಣಗಿ ಪೋಷಿಪ ರಸ ವಾರಿಯಾದ ಮೇಲೆ 1
ಧರೆಯೊಳಗಡಗಿಹ ಧಾತುಜಾಲವ ಕರಗಿಸಿ
ನೆರೆ ವನಸ್ಪತಿವರ್ಗಕೆ ಉಣಿಸನಿತ್ತು
ಪರಿ ಪರಿ ಧಾನ್ಯ ಫಲಂಗಳ ರಚಿಸುತ್ತ
ಹರಹಿ ಲೋಕದೊಳೆಲ್ಲರನು ಪೋಷಿಪ ಪ್ರಭು 2
ಒಂದೇ ಸ್ಥಳದಲಿ ಮೊಳೆತು ಬೆಳೆವ ಬೀಜಕ್ಕೆಲ್ಲ
ಒಂದೇ ವಾಸನೆ ಗುಣ ರುಚಿಗಳುಂಟೇ
ಸಂದೇಹ ಬೇಡ ನಿರ್ಲಿಪ್ತ ತಾನವುಗಳ
ಕುಂದಿಸದೆ ಗುಣ ಸ್ವಭಾವಗಳ ಪೋಷಿಸುವ 3
ಸರ್ವವಸ್ತುಗಳಲ್ಲು ಅಂತರ್ಯಾಮಿಯಾಗಿ
ಸರ್ವ ಚರಾಚರಕೆ ನಿಯಾಮಕನಾಗಿ
ಸರ್ವರೊಳಡಗಿ ಪೋಷಿಪ ಘನಪ್ರಭುವಾಗಿ
ಸರ್ವರುತ್ಪತ್ತಿ ಸ್ಥಿತಿಗೆ ಕಾರಣನಹ 4
ಪರಮಪುರುಷ ತನ್ನನಂತ ಮಹಿಮೆಯೊಳು
ಕಿರಿದೊಂದಂಶದಿ ವಾರಿರೂಪದೊಳಿಂತು
ಸರುವ ಚರಾಚರದಿರುತಂತರ್ಗತನಾಗಿಪೊರೆವ ಜನವ ರಘುರಾಮವಿಠಲ ಪ್ರಭು 5
****
No comments:
Post a Comment