Showing posts with label ಪ್ರಾಚೀನ ಕರ್ಮವು ಬಿಡಲರಿಯದು purandara vittala. Show all posts
Showing posts with label ಪ್ರಾಚೀನ ಕರ್ಮವು ಬಿಡಲರಿಯದು purandara vittala. Show all posts

Friday, 6 December 2019

ಪ್ರಾಚೀನ ಕರ್ಮವು ಬಿಡಲರಿಯದು purandara vittala

check similar song under neleyadikeshava ankita

ಪುರಂದರದಾಸರು
ರಾಗ ಮುಖಾರಿ. ಝಂಪೆ ತಾಳ

ಪ್ರಾಚೀನ ಕರ್ಮವು ಬಿಡಲರಿಯದು
ಯೋಚನೆಯ ಮಾಡಿ ನೀ ಬಳಲ ಬೇಡ || ಪ||

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು
ತನ್ನಿಂದ ತಾನೆ ತಿಳಿಯಲರಿಯದೆ
ಇನ್ನು ದೇಹವನು ಆಶ್ರಯಿಸಿ ಫಲವೇನು
ಉನ್ನಂತ ಹರುಷದಲಿ ಮನದಿ ಯೋಚಿಸುವ ||

ಲೋಕಾದಿ ಲೋಕಗಳ ತಿರುಗುವ ರವಿರಥಕೆ
ಏಕ ಗಾಲಿಗೆ ಏಳು ಕುದುರೆ ಕಟ್ಟಿ
ಆಕಾಶ ಮಾರ್ಗದಲಿ ತಿರುಗುವ ಅರುಣನಿಗೆ
ಬೇಕಾದ ಚರಣಗಳ ಕೊಡಲಿಲ್ಲ ಹರಿಯು ||

ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ
ಖ್ಯಾತಿಯನೆ ಮಾಡಿ ರಾವಣನ ಗೆದ್ದು
ಸೀತೆಯನು ತಂದು ಶ್ರೀ ರಾಮನಿಗೆ ಕೊಡಲಾಗಿ
ಪ್ರೀತಿಯಿಂ ಕೌಪೀನವ ಬಿಡಿಸಲಿಲ್ಲ ಹರಿಯು ||

ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನು
ಹೊತ್ತುಕೊಂಡು ಇದ್ದ ಜಗವರಿಯಲು
ಅತ್ಯಂತ ಸೇವಕನೆಂದು ಮೂಗಿನ ಡೊಂಕು
ಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ ||

ಇಂತೆಂದು ಈ ಪರಿ ತಮ್ಮೊಳಗೆ ತಾವು ತಿಳಿದು
ಭ್ರಾಂತನಾಗದೆ ಬಯಕೆಗಳನು ಜರಿದು
ಶಾಂತಮೂರುತಿ ಸಿರಿ ಪುರಂದರವಿಠಲನ
ಸಂತತದಿ ಬಿಡದೆ ಭಜಿಸೆಲವೊ ಮನುಜ ||
***

pallavi

prAcIna karmavu biDalariyadu yOcaneya mADi nI baLala bEDa

caraNam 1

munna mADida karma bennaTTi barudiralu tanninda tAne tiLiyalariyade
innu dEhavanu Ashrayisi phalavEnu unnanta haruSadali manadi yOcisuva

caraNam 2

lOkAdi lOkagaLa tiruguva ravithake Eka gAlige Elu kudure kaTTi
AkAsha mArgadali tiruguva aruNanige bEkAda caraNagaLa koDalilla hariyu

caraNam 3

sEtuveya kaTTi lankege hAri hanumanta kyAdiyena mADi rvaNana geddu
sIteyanu tandu shrI rAmanige koDalAgi prItiyim kaupInava biDisalilla hariyu

caraNam 4

nityadali garuDa sEveya mADi viSNuvanu hottu koNDu idda jagavariyalu
atyanta sEvakanendu mUgina Dongu etti neTTage mADalilla shrI krSNa

caraNam 5

sAsira nAmavu oDeyAdi kEshavana bEsarade hegala mEliTTukoNDu
AkAsha mArgadalli tiruguva garuDanige nAshikada Donku tA tIdalla hariya

caraNam 6

intendu I pari tammoLage tAvu tiLidu bhrAntanAgade bayakegaLanu jaridu
shAnta mUruti siri purandara viTTlana santatadi biDade bhajiselavo manuja
***

ಪ್ರಾಚೀನ ಕರ್ಮವು ಬಿಡಲರಿಯದು 
ಯೋಚನೆಯ ಮಾಡಿ ನೀ ಬಳಲಬೇಡ ಪ.

ಮುನ್ನಮಾಡಿದಕರ್ಮ ಬೆನ್ನಟ್ಟಿ ಬರುತಿರಲುತನ್ನಿಂದ ತಾನೆ ತಿಳಿಯಲರಿಯದೆಇನ್ನು ದೇಹವನು ಆಶ್ರಯಿಸಿ ಫಲವೇನುಉನ್ನತ ಹರುಷದಲಿ ಮನದಿ ಯೋಚಿಸುವ 1

ಲೋಕಾದಿ ಲೋಕಗಳ ತಿರುಗುವರವಿ ರಥಕೆಏಕಗಾಲಿಗೆ ಏಳು ಕುದುರೆಕಟ್ಟಿಆಕಾಶ ಮಾರ್ಗದಲಿ ತಿರುಗುವ ಅರುಣನಿಗೆಬೇಕಾದ ಚರಣಗಳ ಕೊಡಲಿಲ್ಲ ಹರಿಯು 2

ಸೇತುವೆಯುಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯನೆ ಮಾಡಿ ರಾವಣನ ಗೆದ್ದುಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಿಂ ಕೌಪೀನವ ಬಿಡಸಲಿಲ್ಲ ಹರಿಯು 3

ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನುಹೊತ್ತುಕೊಂಡು ಇದ್ದ ಜಗವರಿಯಲುಅತ್ಯಂತ ಸೇವಕನೆಂದು ಮೂಗಿನಡೊಂಕುಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ 4

ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದುಭ್ರಾಂತನಾಗದೆ ಬಯಕೆಗಳನುಜರಿದುಶಾಂತ ಮೂರುತಿಸಿರಿ ಪುರಂದರವಿಠಲನ
**********