Showing posts with label ನೋಡು ನೋಡು ಗರುಡಗಮನನೆ ಮಾಡು ದಯವನು vijaya vittala. Show all posts
Showing posts with label ನೋಡು ನೋಡು ಗರುಡಗಮನನೆ ಮಾಡು ದಯವನು vijaya vittala. Show all posts

Wednesday, 16 October 2019

ನೋಡು ನೋಡು ಗರುಡಗಮನನೆ ಮಾಡು ದಯವನು ankita vijaya vittala

ವಿಜಯದಾಸ
ನೋಡು ನೋಡು ಗರುಡಗಮನನೆ
ಮಾಡು ದಯವನು ವೇಗದಿ ಪ

ಪಾಡುವೆ ಆನಂದದಲಿ ನಿನ್ನನು
ಕೊಂಡಾಡುವೆನು ನಿನ್ನ ಮೂರ್ತಿಯಾ ಅಪ

ಮಂಗಳಾಂಗನೆ ಮನ್ಮಥನ ಪಿತ
ಸಂಗೀತ ಸುರಲೋಲನೆ
ಕಂಗಳಬ್ಬರ ತೀರುವಂತೆ
ಚರಣಂಗಳನೆ ತೋರೋ ವಿನಯದಿ1

ಪರಮ ಪುರುಷನೆ ಪುಣ್ಯ ಶ್ಲೋಕನೆ
ದುರುಳ ದೈತ್ಯರ ದಲ್ಲಣ
ಮರಿಯಲೀಸದೆ ನಿನ್ನ ಚರಣ
ಸ್ಮರಣೆ ಒದಗಿಸೊ ವದನಕೆ 2

ವಂದನೆಯು ಗೋವಿಂದ ಗೋಪಾಲಾ
ಮಂದರಧರ ಮಾಧವಾ
ಇಂದು ವಿಜಯವಿಠ್ಠಲ ನಿನ್ನ
ಸಂದರ್ಶನವ ಕೋರುತಾ 3
***

pallavi

nODu nODu garuDagamanane mADu dayavanu vEgadi

anupallavi

pADuve Anandadali ninnanu koNDADuvenu ninna mUrtiyA

caraNam 1

mangaLAnganE manmathana pitA sangIta suralOlane
kangaLabbara tIruvantE caraNgaLane tOro vinayadi

caraNam 2

parama puruSane puNya shlOkane duruLa daityara dallaNa
mariyalIsade ninna caraNa smaraNe odagisO vadanake

caraNam 3

vandaneyu gOvinda gOpAla manadadhara mAdhavA
indu vijayaviThala ninna sandarshanava tOruta
***


ನೋಡು ನೋಡು ಗರುಡಗಮನನೆ 
ಮಾಡು ದಯವನು ವೇಗದಿ ll ಪ ll

ಪಾಡುವೆ ಆನಂದದಲಿ ನಿನ್ನನು
ಕೊಂಡಾಡುವೆನು ನಿನ್ನ ಮೂರ್ತಿಯಾ ll ಅಪ ll

ಮಂಗಳಾಂಗನೆ ಮನ್ಮಥನ ಪಿತ
ಸಂಗೀತ ಸುರಲೋಲನೆ
ಕಂಗಳಬ್ಬರ ತೀರುವಂತೆ
ಚರಣಂಗಳನೆ ತೋರೋ ವಿನಯದಿ ll 1 ll

ಪರಮ ಪುರುಷನೆ ಪುಣ್ಯ ಶ್ಲೋಕನೆ
ದುರುಳ ದೈತ್ಯರ ದಲ್ಲಣ
ಮರಿಯಲೀಸದೆ ನಿನ್ನ ಚರಣ
ಸ್ಮರಣೆ ಒದಗಿಸೊ ವದನಕೆ ll 2 ll

ವಂದನೆಯು ಗೋವಿಂದ ಗೋಪಾಲಾ
ಮಂದರಧರ ಮಾಧವಾ
ಇಂದು ವಿಜಯವಿಠಲ ನಿನ್ನ
ಸಂದರ್ಶನವ ಕೋರುತಾ ll 3 ll
*****