Showing posts with label ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ prananatha vittala. Show all posts
Showing posts with label ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ prananatha vittala. Show all posts

Thursday 5 August 2021

ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ಪ


ಮರುಗ ಮಲ್ಲಿಗೆ ಜಾಜಿಸಂಪಿಗೆ ಸುರಗಿಬಕುಳ ಪಾದರಿ

ಪರಿಪರಿಯಿಂದ ಹಾರ ಕಟ್ಟಿ ಹರಿನಾ ನಿನ್ನ ಕೊರಳಿಗೆ 1


ಕಮಲ ಪುಷ್ಪದ ಹಾರವನ್ನು ವಿಮಲ ಮನದಿ ತಂÀದಿಹೆ

ಸುಮಶರಪಿತ ಕೊರಳ ಕೊಟ್ಟರೆ ನಮಿಸಿ ನಿಮಗೆ ಹರುಷದಿ 2


ಮಾನಿನಿಯರ ಮೊರೆಯಕೇಳಿ ಪ್ರಾಣನಾಥವಿಠ್ಠಲ

ತಾನೆ ಕರವನೀಡಿ ಹಾರವ ಗಾನಲೋಲ ಧರಿಸಿದ 3

***