Showing posts with label ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ramavallabha vittala. Show all posts
Showing posts with label ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ramavallabha vittala. Show all posts

Friday, 6 August 2021

ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ankita ramavallabha vittala

 ..

Kruti by ಸರಸಾಬಾಯಿ Sarasabai 


ಸಂತೆಯ ಬಿದನೂರು ಹನುಮಂತ

ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ.


ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ.


ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ

ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ

ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ 1


ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ

ಪಂಥದಲಿ ಕೀಚಕನ ಸೋಲಿಸಿ ನಿಂತು

ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ 2


ಮದ್ದಿಗೆ ಭಟ್ಟರಲಿ ನೀ ಜನಿಸೀ

ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ

ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ 3


ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ

ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ

ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ 4


ರಾಮ ಸೇವೆ ನೀ ಸಂಭ್ರಮದಲಿ ಮಾಡಿ

ರಾಮರ ಧ್ಯಾನ ಮಾಡುತ ಪೂಜಿಸುತಿರುವಿ

ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ 5

***