Showing posts with label ಶ್ರೀಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನಶಾಮನ kamalanabha vittala SRI MAHALAKSHMIDEVIYE PAALISE ENNA SHAAMANA. Show all posts
Showing posts with label ಶ್ರೀಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನಶಾಮನ kamalanabha vittala SRI MAHALAKSHMIDEVIYE PAALISE ENNA SHAAMANA. Show all posts

Thursday, 2 December 2021

ಶ್ರೀಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನಶಾಮನ ankita kamalanabha vittala SRI MAHALAKSHMIDEVIYE PAALISE ENNA SHAAMANA






by ನಿಡಗುರುಕಿ ಜೀವೂಬಾಯಿ
ಶ್ರೀ ಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನಶಾಮನಯ್ಯನ ರಾಣಿಯೆ ಪ

ಜಾಣೆ ನಿನಗೆ ಸರಿಗಾಣೆನೆ ಗುಣಮಣಿಮಾಲೆ ಸುಗುಣೆ ಅಹಿವೇಣಿಯೆಜನನಿಅ.ಪ

ನಿಗಮವೇದ್ಯಳೆ ನಿನ್ನನು ಪೊಗಳುವೆ ನಾನುತ್ರಿಗುಣಾಭಿಮಾನಿ ಸ್ತುತಿಪೆನುಬಗೆಬಗೆ ಭಜಿಪೆ ನಿನ್ನನು ಬಂದೆನ್ನ ಮನದಿನಗಧರನ ತೋರೆಂಬೆನುಹಗಲು ಇರಳು ನಿನ್ನ ಬಗೆ ಬಗೆ ಸ್ತುತಿಪರಪಾದ-ಗಳಸೇವಿಪ ಪರಮಾನಂದದಮಿಗೆ ಸೌಭಾಗ್ಯವ ಕರುಣಿಸು ಬೇಗದಿಸುದತಿಮಣಿಯೆಹರಿಪಾದಯುಗ ತೋರೌ1

ಭಕ್ತವತ್ಸಲನ ರಾಣಿಯೆ ಭಜಿಸುವೆ ನಿನ್ನಮತ್ತೆ ಮಾಧವನ ಪಾದವಭಕ್ತಿಂದ ಭಜಿಪ ಧ್ಯಾನವÀ ಕೊಟ್ಟು ಕಾಪಾಡೆಸತ್ಯ ಮೂರುತಿಯ ದೇವಿಯೆಉತ್ತಮ ಭಕ್ತರಿಗಿತ್ತ ವರಗಳನುಮತ್ತೆ ಕೇಳಿಮನ ತೃಪ್ತಿಯ ತಾಳುತಚಿತ್ತಜಪಿತನೊಳು ಭಕ್ತಿಮಾಡುವ ಬಗೆಇತ್ತು ಪಾಲಿಸು ಸರ್ವೋತ್ತಮನರಸಿಯೆ 2

ಪದ್ಮಸಂಭವೆ ಪಾಲಿಸು ಪದ್ಮಾಕ್ಷಿ ನಿನ್ನಪದ್ಮನಾಭನ ತೋರಿಸುಪದ್ಮನೇತ್ರೆಯೇಲಾಲಿಸು ಪಾಪವಹರಿಸುಶುದ್ಧಮನವ ಮಾಡಿಸುಪದ್ಮ ಸರೋವರ ಮಧ್ಯದಿ ಜನಿಸಿದಪದ್ಮದೊಳುದಿಸಿದ ಪದ್ಮಾವತಿಯೆ ಹೃ-ತ್ಪದ್ಮದಿ ಕಮಲನಾಭ ವಿಠ್ಠಲನಪಾದತೋರಿಉದ್ಧರಿಸೆನ್ನ ಪ್ರಸಿದ್ಧಳೆಜನನಿ3
****