Showing posts with label ಜಯ ದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರ gurumahipati. Show all posts
Showing posts with label ಜಯ ದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರ gurumahipati. Show all posts

Wednesday, 1 September 2021

ಜಯ ದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಜಯದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ 


ಹಭವ ಭವಮುಖರಮೊರೆಯನು ಕೇಳುತಲಿ ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1 

ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2 

ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3 

ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4 

ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು ನೀತಿಯ ತಪ್ಪಿದ ರಾವಣ ಕುಂಭಶ್ರವಣರನು ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5 

ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6 

ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7

****