..
ಸಾಧನವಿದ್ದದಕೆ ಮಧು
ಸೂದನ ಗುಣಗಳ ಶೋಧನ ಮಾಡೋದೇ ಪ
ಹರಿ ಸರ್ವೋತ್ತಮ ಗುರು ಜೀವೋತ್ತಮ
ಪುರಹರ ಸುರವರ ಪರಿವಾರಾ
ಮರೆಯದೆÀ ದಿನದಿನ ಸ್ಮರಿಸುತ ತರತಮ
ವರಿತು ವಿಧಿಯ ನೀ ಪರಿಪರಿ ಭಜಿಪೋದೆ 1
ಮೂಲನಾರಾಯಣ ಲೀಲೆಯ ಮುಗಿಸೀ
ಬಾಲನಾಗಿ ಆ ಲಯಕಾಲದಲಿ
ಮಾಲೋಲ ಬಾಯಲಿ ಕಾಲಿನಗುಂಟವಿಟ್ಟು
ಸೀಲಜೀವರ ಪ್ರೇಮ ಮೆಲ್ಲುವನೆಂಬುದೆ 2
ಮತ್ಸ್ಯಮೊದಲು ಶಿರಿವತ್ಸಧರನ ಬಲು
ಸ್ವಚ್ಛರೂಪಗುಣ ಸ್ವೇಚ್ಛೆಯಲೀ
ಉಚ್ಚರಿಸುತ ಪರರಿಚ್ಛೆಯಮಾಡದೆ
ಮತ್ಸರಿಸದೆ ಪರಮೋತ್ಸನಾಗೋದೆ 3
ಸೋತುಮಜನ ಮನೋಪ್ರೀತಿಯ ಪಡೆದೀ
ರೀತಿಯ ತತ್ತ್ವದ ಮಾತನು ತಿಳಿದೂ
ಮಾತಾಪಿತರು ಸತಿ ಪೋತರು ಸಿರಿಸತಿ
ನಾಥನ ಪದಯುಗದೂತರು ಎಂಬುದೆ 4
ಮನಿಯನು ತ್ಯಜಿಸಿ ವನವನು ಚರಿಸೀ
ತನುವನು ದಂಡಿಸಿ ದಿನದಿನದೀ
ವನಜಾಕ್ಷನ ಗುಣ ಮನದಲಿ ಎಣಿಸಿದೆ
ದಣಿದರೆ ಮುಕುತಿಯು ತನಗಿಲ್ಲೆಂಬುದೆ 5
ಈಶಪ್ರಮುಖರಮರೇಶರು ಸರ್ವದ
ಶ್ರೀಶನ ಪದಯುಗದಾಸರು ಎನುತಾ
ಕ್ಲೇಶಸೌಖ್ಯ ಸರ್ವೆಶನಿಗರ್ಪಿಸಿ
ದಾಸನಾಗಿ ಭವದಾಸೆಯ ನೀಗೋದೆ 6
ನಿಂದಿಸೆ ಮನದಲಿ ಕುಂದದೆ ತುತಿಸಲು
ವಂದನೆ ಮಾಡಲು ಹಿಗ್ಗದಲೆ
ದ್ವಂದ್ವಕೆ ಭಾಗಿಯು ಇಂದಿರೇಶನೆಂದು
ನಂದದಿ ಪರರನು ನಿಂದಿಸದಿಪ್ಪೋದೆ 7
ಮಾಸೋಪೋಷÀಣ ಶ್ವಾಸವ ಬಂಧಿಸಿ
ಕ್ಲೇಶದಿ ತಪದಾಯಾಸವ ಬಡದೆ
ಬೇಸರಗೊಳದೆ ರಮೇಶನ ಗುಣಗಳು
ಪಾಸನ ಮಾಡುತ ಸೋಸಿಲಿ ಇರುವೋದೆ 8
ವೇದಶಾಸ್ತ್ರಗಳೋದಿದ ಮದದೀ
ಸಾಧುಗಳೊಡನೆ ವಿವಾದವ ಮಾಡೆ
ಮಾಧವ ದೊರೆಯನು ಖೇದವು ಬರುವುದು
ಮೋದ ಕೊಡುವವೋ ಹಾದ್ಯೆಲ್ಲೆಂಬೋದೆ 9
ಉದಕದಿ ಮುಳಗೀ ವದÀನದಿ ಜಪಿಸಲು
ಪದುಮನಾಭನೆಂದಿಗೂ ದೊರೆಯ
ಮದಮತ್ಸರಕಾಮಕ್ರೋಧವ ಬಿಟ್ಟು
ಸದಮಲಮೂರುತಿ ಹೃದಯದಿ ಕಾಂಬೋದೆ 10
ತೃಣಮೊದಳಾದ್ರುಹಿಣಾಂತೀ ಜಗದೊಳು
ಫಣಿಶಯನನ ಗುಣಗಣಿಸುತಲೀ
ಮಣಿಕಾಂಚನತೃಣ ಸಮವೆಂದರಿದೂ
ತಣಿಸದೆ ಹರಿಮೂರ್ತಿಯ ಭಜಿಸುವುದೆ
ಅಂಬುಜ ಭವನಾಂಡದಿ ಶಿರಿ
ಬಿಂಬನೆ ಈ ಪರಿ ತುಂಬಿಹನೊ
ಪೊಂಬೊಸುರಾಮರರಿಗಿಂಬಾಗೀ ಜಡ
ಬೊಂಬೆಯ ತೆರ ಕುಣಿಸುವನೆಂಬೋದೆ 11
ಆವಕಾಲದಲಿ ಅವದೇಸದಲಿ
ಅವಾವಸ್ಥೆಯು ಬರಲಿನ್ನು
ಶ್ರೀವರ ತಾ ನಮ್ಮ ಕಾವನುಎ ನುತ
ಭಾವಿಸಿ ಈ ಪರಿ ಸೇವೆಯ ಮಾಡೋದೆ 12
ಐಹಿಕ ಸುಖ ತಾ ವಹಿಸದೆ ಮನದಲಿ
ಮಹಿತನ ಪದಯುಗ ಭಜಿಸುತಲೀ
ಸಹಿಸುತ ದ್ವಂದ್ವವ ಮಹಿತಳ ಮಧ್ಯದಿ
ವಹಿಸಿದ ದಾಸ್ಯದ ವಿಹಿತನು ಎನಿಸೋದೆ13
ದಾತಗುರು ಜಗನ್ನಾಥ ವಿಠಲನ
ದೂತನಾಗಿ ಬರೆ ಖ್ಯಾತಿಯ ಪಡದೆ
ಮಾತಾಪಿತಸುತ ಭ್ರಾತಬಂಧು ಶಿರಿ
ನಾಥನೆಂದು ಈ ರೀತಿಲಿ ಇಪ್ಪೋದೆ14
***