Showing posts with label ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ gurumahipati. Show all posts
Showing posts with label ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ gurumahipati. Show all posts

Wednesday, 1 September 2021

ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ ankita gurumahipati

ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ ಪ  

ತೋರಿ ಕೊಡುವುದಲ್ಲ ತೋರಿಸಿ ತಾ ಕೊಂಬುವದಲ್ಲ ತೋರಿಕೆಗೆರಡಿಲ್ಲ ತೋರಿ ತೋರದದರೊಳಾಡುವದೆಲ್ಲ 1 

ಬಯಲಿಗೆ ನಿರ್ಬೈಲು ಬಯಲಿಲಿದ್ದವ ಬಲ್ಲಿದರ್ಹೋಯಿಲು ಶ್ರೇಯ ಸುಖದ ಕೀಲು ಜೈಸಿಹ ಮನದವಗಿದು ಮೇಲು 2 

ಜ್ಞಾನರಹಿತ ಕೂಟ ಮನೋನ್ಮಕಾಗಿಹ್ಯ ಮುಗುಟ ಅನುದಿನ ಮಹಿಪತಿ ಸುಖದೂಟ3

****