..
ದಾತನೀತ ಯತಿನಾಥ ನಿಜಪದ
ದೂತಜನರ ಪೊರೆವಾ ಪ
ಧಾತನಾಂಡದೊಳತಿ ಖ್ಯಾತನಾಗಿ ಶಿರಿ
ನಾಥ ನೊಲಿಸಿ ಮೆರೆವಾ
ನೀತಮನದಿ ತನ ಮಾತು ಮೀರಿದಿಹ -
ಗೀತೆರದಿ ತಾನೆ ಒಲಿವಾ
ತಾತನೆ ಮನೋಗತ ಭೀತಿಯ ಬಿಡಿಸೆನೆ
ಪ್ರೀತಿ ಮನದಿ ತಾ ಬರುವಾ ಅ.ಪ
ರಾಮ ಕೃಷ್ಣ ನರಹರ್ಯಂಘ್ರಿಯ
ಪ್ರೇಮಮನದಿ ಭಜಿಪಾ
ನೇಮದಿ ತನ್ನನು ಕಾಮಿಪ ಜನರಿಗೆ
ಕಾಮಿತ ಫಲರೂಪಾ
ಈ ಮಹಾ ಮಹಿಮೆಯ ನೇಮದಿ ತೋರುವ
ಭೂವಿ ಸುರರ ಭೂಪಾ
ತಾಮಸ ಮತಿ ನಿರ್ಧೂಮ ಗೈಸುವ
ಧೂಮಕೇತುನೆನಿಪಾ 1
ಮಂದ ಜನರಿಗೆ ಎಂದಿಗಲಭ್ಯನ -
ಮಂದ ಜನರ ಪ್ರೀಯಾ
ಪೊಂದಿದ ಜನರಾ ಕುಂದೆÀಣಿಸದೆ ತಾ
ನಂದ ಕೊಡವೊ ಮಹಾರಾಯಾ
ವಂದಿಪ ಜನರಘ - ವೃಂದವ ದರುಶನ -
ದಿಂದ ತರಿವೊ ಜೀಯಾ
ಸುಂದರತರ ವೃಂದಾವನ ನಿಜ
ಮಂದಿರ ಗತ ಧ್ಯೇಯಾ 2
ದಾತಗುರು ಜಗನ್ನಾಥ ವಿಠಲನತಿ
ಪ್ರೀತಿಯಿಂದ ಭಜಿಪಾ
ದೂತ ಜನರು ಬಲು ಆತುರದಲಿ ಕರಿಯೆ
ಪ್ರೀತ ಮನದಿ ತಾ ಬಪ್ಪ
ಮಾತೆಯತೆರ ನಿಜ ದೂತರÀ ಮನಸಿನ
ಮಾತು ನಡೆಸುವ ನೀಭೂಪಾ
ಈತಗೆ ಸರಿಯತಿನಾಥ ಕಾಣೆನೊ
ಭೂತಳೇಶರಧಿಪಾ 3
***