Showing posts with label ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದು purandara vittala. Show all posts
Showing posts with label ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದು purandara vittala. Show all posts

Friday, 6 December 2019

ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದು purandara vittala

ಪುರಂದರದಾಸರು
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದುಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.

ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನುಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪ

ಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯಕಟ್ಟಿದ ಮನೆ ಇದ್ದಂತಿಹುದುಹೊಟ್ಟೆತುಂಬ ಉಣದೆ ಧನವ ಗಳಿಸಿ - ಬಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1

ಅತಿ ಪ್ರೀತಿಯಿಂದ ಮದುವೆಯಾದ ಮೋಹದಸತಿ ತನ್ನ ಮರಣದ ಕಾಲಕ್ಕೆಗತಿಯಾವುದೆನುತಲೆ ಮರುಗಿದಪ್ಪಳಲ್ಲದೆಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2

ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದಕಂದ ನಿನ್ನಾವಸಾನ ಕಾಲಕೆಮುಂದೇನು ಸಂಸಾರ ನಡೆಸಲುಪಾಯವೇನೆಂದು ಚಿಂತಿಸುವ ಸಂಗಡ ಬಾಹನಲ್ಲ 3

ನಾಟರಿಷ್ಟರು ಬಂಧು - ಬಳಗವುಹರಿ ಕೊಟ್ಟುದುಂಟಾದರೆ ಬಂದು ಉಣ್ಣುವರುಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟುಕಂತಿಯ ತಂದೊಟ್ಟಿ ಸುಡುವರು ಕಾಣೊ 4

ಇಂತಿದು ಒಂದು ಪ್ರಯೋಜನ ನಿನಗಿಲ್ಲಅಂತ್ಯಕಾಲಕ್ಕೆ ಸಂಗಡ ಬಾಹುದುಕಂತುಜನಕ ನಮ್ಮ ಪುರಂದರವಿಠಲನಸಂತತ ಧ್ಯಾನದೊಳಿರು ಕಾಣೋ ಮನುಜಾ 5
********