ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೆ ಬಾರೈರಾಮಾ ಪ
ಬಿಸಜಾಪ್ತ ವಂಶಲಲಾಮ ಅ.ಪ
ಮಾನಸ ಪೀಠಕೆ ಜಾನಕಿದೇವಿ ಸಹಿತಾ
ಆನತರಿಗೆ ಸೌಖ್ಯವ ಬೀರುತಲಿ
1
ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು
ಧರ್ಮಸ್ಥಾಪಿಸೆ ಧರಣಿ ಮಂಡಲದಿ
2
ಹನುಮಂತ ಜಾಂಬವ ಇನತನಯಾಂಗದಾದಿ
ಘನಕಪಿವೀರರು ಕಾದುಕೊಂಡಿರುವರು
3
ಕಾಮಾದಿ ವರ್ಗಂಗಳ ನಿರ್‍ನಾಮವಾಗಿ ಪೋಪಂತೆ
ನೀಮನವಲಿದನುಗ್ರಹಿಸಿ ಬೇಗದಿ
4
ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು
ಅಂತರಾತ್ಮಕ ಗುರುರಾಮ ವಿಠಲನೆ
5
***