Showing posts with label ಕಂಡೆ ಕಂಡೆನು ಕೃಷ್ಣ ನಿನ್ನಯ ಭವ್ಯ ಭಾವದ gurugovinda vittala. Show all posts
Showing posts with label ಕಂಡೆ ಕಂಡೆನು ಕೃಷ್ಣ ನಿನ್ನಯ ಭವ್ಯ ಭಾವದ gurugovinda vittala. Show all posts

Wednesday, 1 September 2021

ಕಂಡೆ ಕಂಡೆನು ಕೃಷ್ಣ ನಿನ್ನಯ ಭವ್ಯ ಭಾವದ ankita gurugovinda vittala




ಕಂಡೆ ಕಂಡೆನು ಕೃಷ್ಣ ನಿನ್ನಯ | ಭವ್ಯ ಭಾವದ ಮೂರ್ತಿಯ ಪ

ಹಿಂಡು ದೈವರ ಗಂಡನ ಅ.ಪ.

ಪಾದ ಶೋಭಿಸೆ | ಘುಲು ಘುಲೆನ್ನುವ ಪೈಜಣ |
ಉಲಿವ ಗೆಜ್ಜೆಯಲಿಂದ ಮೆರೆಯುವ |
 ಚಲುವ ಕೃಷ್ಣನ ಸೊಂಟವ 1

ಲಕ್ಷ್ಮೀ ವಕ್ಷಸ್ಥಿತನು ಎನಿಪನ | ಅಕ್ಷಯಾಂಬರವಿತ್ತನ |
ಕುಕ್ಷಿಯೊಳು ಜಗ ಧರಿಸಿ ಮೆರೆವನ | 
ಪಕ್ಷಿವಾಹನ ದೇವನ 2

ವೃಷ್ಣಿಕುಲ ಸಂಭೂತನೆನಿಪನ | ಜಿಷ್ಣುವಿಗೆ ಸಖನೆನಿಪನ |
ವಿಷ್ಣು ಮೂರುತಿ ವಿಷ್ಠರ ಶ್ರವ | 
ಕೃಷ್ಣನ ಮಹಮಹಿಮನ 3

ಕೌಸ್ತುಭ ಹಾರ ಶೋಭಿತ | ಸರಸಿ ಜಾಸನಧಿಷ್ಟಿತ ||
ಮೆರೆವ ತ್ರಿವಳಿಯ ಕಂಠ ಶೋಭಿತ | 
ಸರ್ವ ವೇದಗಳುಧೃತ 4

ತೋಳ ಬಾಪುಕಿ ಬಾಹು ಕೀರ್ತಿಯ | ಕೈಲಿ ಕಡಗೋಲ್ಬಲದಲಿ |
ಮೇಲೆ ರಜ್ಜುವ ತಾನೆ ಪಿಡಿದಿಹ | 
ಕೈಲಿ ವಾಮದ ಪಾಶ್ರ್ವದಿ 5

ಸುರರು ಪರಿ ತುತಿಪುದ 6

ಕುಂಡಲ ಫಣಿ ವಿಭೂಷಣ ಸೇವಿತ 7

ಭುವನ ಮೋಹನ ದೇವ ದೇವನ | 
ಪವನನಯ್ಯನು ಎನಿಪನ |ಮಧ್ವ ಸರಸಿಯ ತಟದಿ ಮೆರೆವನ | 
ಮಧ್ವಮುನಿ ಸ್ತುತಿಗೊಲಿದನ 8

ಅಷ್ಟ ಮಠಗಳ ಯತಿಗಳಿಂದಲಿ | 
ಸುಷ್ಠು ಪೂಜಿತ ಚರಣನದಿಟ್ಟ ಗುರು ಗೋವಿಂದ ವಿಠಲನ |
ಸೃಷ್ಟಿ ಸ್ಥಿತಿ ಲಯ ಕರ್ತನ 9
****
KANDE KANDENU KRISHNA NINNAYA BHAVYA BHAAVADA