Showing posts with label ಗುಜ್ಜಿ ರುಕ್ಮಿಣಿಗೆ ನಾಚಿ ಲಜ್ಜವಗೈಯ್ಯು ramesha. Show all posts
Showing posts with label ಗುಜ್ಜಿ ರುಕ್ಮಿಣಿಗೆ ನಾಚಿ ಲಜ್ಜವಗೈಯ್ಯು ramesha. Show all posts

Monday, 11 November 2019

ಗುಜ್ಜಿ ರುಕ್ಮಿಣಿಗೆ ನಾಚಿ ಲಜ್ಜವಗೈಯ್ಯು ankita ramesha

ಗಲಗಲಿಅವ್ವನವರು
ಗುಜ್ಜಿರುಕ್ಮಿಣಿಗೆ ನಾಚಿ ಲಜ್ಜವಗೈಯ್ಯುತಲೆಮುಂದಕ್ಕೆ ಹೆಜ್ಜೆ ಹಾಕಲೊಲ್ಲಿ ಯಾಕೆಅರ್ಜುನನ ರಾಣಿ ಮುದ್ದು ಅರ್ಜುನನ ರಾಣಿ ಪ.

ಒಬ್ಬರಿಗಿಂತ ಒಬ್ಬರ ಚಲ್ವಿಕೆಗೆ ಉಬ್ಬಿಹಳುಐವರ ನಿರ್ಭಯದಿ ನಾಚಿಕೆಯ ಬಿಟ್ಟುಒಬ್ಬಳೆ ಬೆರೆದಾಳು ದ್ರೌಪತಿಒಬ್ಬಳೆ ಬೆರೆದಾಳು 1

ತರುಳ ರೈವರ ಚಲ್ವಿಕೆಗೆ ಮರುಳುಗೊಂಡಳುಸಭೆಯೊಳು ಅರಳು ಮಲ್ಲಿಗೆಯ ಮಾಲೆಯನುಕೊರಳಿಗೆ ಹಾಕಿದಳುಐವರ ಕೊರಳಿಗೆ ಹಾಕಿದಳು 2

ಪಂಚ ಪಾಂಡವರ ನೋಡಿ ಚಂಚಲಾಗಿಹಳುನಾಚಿ ಹಂಚಿಕೆ ಹಾಕುವಾಗಜಾಣಿ ಮಂಚದಲ್ಲಿಹಳುದ್ರೌಪತಿ ಮಂಚದಲ್ಲಿಹಳು 3

ಸರಿಕ ಸರಿಕ ನಾರಿಯರೆಲ್ಲಕರವಹೊಯ್ದರುಹೊರಗೆ ಬರಲ್ಹಾಂಗೆಂದು ಹೋಗಿಒಳಗೆ ಸೇರಿದಳು ದ್ರೌಪತಿಒಳಗೆ ಸೇರಿದಳು 4

ಇಂದುರಾಮೇಶನ ಮಡದಿಯರುಬಿದ್ದು ನಗುವಂತೆನಾಚಿಸೆಂದು ಸೇರಿದಳೆ ಹೋಗಿಚಂದಾಗಿ ಆಕಾಂತೆ 5
*******