Showing posts with label ಜಯ ರಾಘವ ಜಯರಾಘವ ರಾಮಾ gurumahipati. Show all posts
Showing posts with label ಜಯ ರಾಘವ ಜಯರಾಘವ ರಾಮಾ gurumahipati. Show all posts

Saturday, 31 July 2021

ಜಯ ರಾಘವ ಜಯರಾಘವ ರಾಮಾ ankita gurumahipati

 ರಾಗ - : ತಾಳ -


ಜಯರಾಘವ ಜಯರಾಘವ ಜಯರಾಘವ ರಾಮಾ l

ಶ್ರಯಕಾರಣಸುಖಪೂರಣ ಭವತಾರಣ ನಾಮಾ ll ಪ ll


ಜಗಪೋಷಣ ಮೃದುಭಾಷಣ ಸುರತೋಷಣಕಾರಿ l

ಅಘಶೋಷಣ ಕುಲಭೂಷಣ ಖರದೂಷಣ ಹಾರಿ ll 1 ll


ಅತಿಸುಂದರ ಗುಣ ಮಂದಿರ ದಶಕಂದರ ಹರಣಾ l

ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ ll 2 ll


ಗಿರಿಜಾ ಪತಿ ವಾಣೀಪತಿ ದಿವಸಾಪತಿ ಧೇಯ l

ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ ll 3 ll

***