ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ನಿಜ ಖೂನ ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಪ
ಸಹಜಾವಸ್ಥೆಗೆ ಬಂದು ನೋಡಿ ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ ದೇಹ ದಂಡನೆಂಬುದು ಬ್ಯಾಡಿ ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ 1
ಸಾಧನವೆಂಬುದೆ ಸಾಕ್ಷೇಪ ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ ಆದಿ ಅನಾದಿ ಸ್ವರೂಪ ಸಾಧಿಸಿದವನೆ ತಾ ಮೂರುಲೋಕ ಆಪ 2
ಎಲ್ಲಕ್ಕೆ ಮೇಲು ಗುರುಭಕ್ತಿ ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ ಇಲ್ಲೆ ತಿಳಿಕೋ ನೀ ಮಹಿಪತಿ ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ 3
***