Showing posts with label ಹರುಷದಲಿ ಕರಪಿಡಿಯೋ ಗುರು ರಾಘವೇಂದ್ರ lakumeesha. Show all posts
Showing posts with label ಹರುಷದಲಿ ಕರಪಿಡಿಯೋ ಗುರು ರಾಘವೇಂದ್ರ lakumeesha. Show all posts

Monday, 6 September 2021

ಹರುಷದಲಿ ಕರಪಿಡಿಯೋ ಗುರು ರಾಘವೇಂದ್ರ ankita lakumeesha

 ankita ಲಕುಮೀಶ 

ರಾಗ: [ದ್ವಿಜಾವಂತಿ] ತಾಳ: [ಖಂಡಛಾಪು]


ಹರುಷದಲಿ ಕರಪಿಡಿಯೋ ಗುರು ರಾಘವೇಂದ್ರ 


ಕರುಣದಿಂದಲಿ ನಿನ್ನ ಚರಣಸೇವೆಯ ನೀಡೀ

ದುರಿತರಾಶಿ ತರಿದು ಹರಿಯ ಹೃದಯದಿ ತೋರಿ  ಅ ಪ


ಮೊದಲ ಯುಗದೊಳು ನೀನು ಉದಯಿಸುತ ಸಂತಸದಿ

ವಿಧಿಪಿತನಭಕುತ ಪ್ರಹ್ಲಾದನೆನಿಸಿ ಅಧಮ ನಿನ್ನ ಪಿತನು 

ಬದಿಯ ಸ್ತಂಭವ ಬಡಿದು ವದಗಿಸೋ ಹರಿ ಎನಲು 

ಮುದದಿಂದ ನರಹರಿಯ ತೋರಿದಿಯೋ ನೀನು  1

ವಸುಧೆಯೊಳಗೇ ಮತ್ತೆ ವ್ಯಾಸರಾಜನೆನಿಸಿ

ಶ್ರೀಸಮೀರಮತಾಬ್ಧಿ ಭೇಶನೆನಿಸೀ 

ಅಸಮ ಪಂಡಿತನೆನಿಸಿ ನೀ ಸಚ್ಚಂದ್ರಿಕೆ ರಚಿಸಿ

ಅಸುರಾರಿ ಹರಿಪಾದ ಬಿಸಜಕರ್ಪಿಸಿದಾತ  2

ಪರಿಮಳಾರ್ಯನೆ ನಿನ್ನ ನಿರುತ ಸೇವಿಪರಿಷ್ಟ-

ಗರೆಯುತಲಿ ಮಂತ್ರಮಂದಿರದಿನೆಲಸಿ

ಸುರಗಂಗೆಪಿತ ನಮ್ಮ ಸಿರಿಲಕುಮೀಶನೆ

ಸರ್ವೋತ್ತಮನೆಂದು ಧರೆಯೊಳಗೆ ಬೀರಿದಾ ಗುರು  3

***