ankita ಲಕುಮೀಶ
ರಾಗ: [ದ್ವಿಜಾವಂತಿ] ತಾಳ: [ಖಂಡಛಾಪು]
ಹರುಷದಲಿ ಕರಪಿಡಿಯೋ ಗುರು ರಾಘವೇಂದ್ರ ಪ
ಕರುಣದಿಂದಲಿ ನಿನ್ನ ಚರಣಸೇವೆಯ ನೀಡೀ
ದುರಿತರಾಶಿ ತರಿದು ಹರಿಯ ಹೃದಯದಿ ತೋರಿ ಅ ಪ
ಮೊದಲ ಯುಗದೊಳು ನೀನು ಉದಯಿಸುತ ಸಂತಸದಿ
ವಿಧಿಪಿತನಭಕುತ ಪ್ರಹ್ಲಾದನೆನಿಸಿ ಅಧಮ ನಿನ್ನ ಪಿತನು
ಬದಿಯ ಸ್ತಂಭವ ಬಡಿದು ವದಗಿಸೋ ಹರಿ ಎನಲು
ಮುದದಿಂದ ನರಹರಿಯ ತೋರಿದಿಯೋ ನೀನು 1
ವಸುಧೆಯೊಳಗೇ ಮತ್ತೆ ವ್ಯಾಸರಾಜನೆನಿಸಿ
ಶ್ರೀಸಮೀರಮತಾಬ್ಧಿ ಭೇಶನೆನಿಸೀ
ಅಸಮ ಪಂಡಿತನೆನಿಸಿ ನೀ ಸಚ್ಚಂದ್ರಿಕೆ ರಚಿಸಿ
ಅಸುರಾರಿ ಹರಿಪಾದ ಬಿಸಜಕರ್ಪಿಸಿದಾತ 2
ಪರಿಮಳಾರ್ಯನೆ ನಿನ್ನ ನಿರುತ ಸೇವಿಪರಿಷ್ಟ-
ಗರೆಯುತಲಿ ಮಂತ್ರಮಂದಿರದಿನೆಲಸಿ
ಸುರಗಂಗೆಪಿತ ನಮ್ಮ ಸಿರಿಲಕುಮೀಶನೆ
ಸರ್ವೋತ್ತಮನೆಂದು ಧರೆಯೊಳಗೆ ಬೀರಿದಾ ಗುರು 3
***
No comments:
Post a Comment