Monday, 6 September 2021

ಬಾಗಿಲ ತೆಗೆಯವ್ವಾ ಲಕ್ಷ್ಮೀದೇವಿ ಬಾಗಿಲ ತೆಗೆಯವ್ವಾ ankita keshava BAAGILU TEGEYAVVA LAKSHMIDEVI BAAGILU TEGEYAVVA

 


..

kruti by karki keshavadasaru


ಬಾಗಿಲ ತೆಗೆಯವ್ವಾ ಲಕ್ಷ್ಮೀದೇವಿ ಬಾಗಿಲ ತೆಗೆಯವ್ವಾ ಪ 


ಬಾಗಿಲ ತೆಗೆಯವ್ವಾ ಸಾಗಿ ಬಂದಿಹನಯ್ಯಾ ಭೋಗಿ ಭೂಷಣ ಪ್ರಿಯ ಕೇಶವನ ದಾಸಾ ಅ.ಪ. ಸಂಸಾರ ಜಾಲದಲೀ ಸಿಲುಕಿ ಬೆಂದೇ ಸಂಸಾರ ಮಾಯದಲೀ ಹಿಂಸೆ ಮಾಡಿದವಯ್ಯಾ ಐದಾರುರಿಪುಗಳು ಸಂಶಯ ಪಡದೆ ಬಂದೇ ಶರಣೆಂದೇ 1 


ಭವದೊಳುರಳಿ ಬಿದ್ದೆನೋ ಪ್ರಾಣಾಂತಕ ಸವೆದು ಕರಗಿ ಬೆಂದೆನೋ ಯುವತಿಯರೊಡಗೂಢಿ ಇಹವೆನ್ನೆ ನೆರೆನಂಬಿ ವಿವಿಧ ಕಷ್ಟವ ಪೊಂದಿ ಬಂದೇ ಶರಣೆಂದೇ 2 


ಹಲವು ಜನ್ಮಗಳಿಂದ ನೋಡಲು ಬಂದೆ ಹಲವು ರೀತಿಗಳಿಂದ ನಳಿನ ನಾಭನ ದಿವ್ಯ ರೂಪವ ನೋಡುವೆ ನಳಿನಾಕ್ಷಿ ತಾಯ ಕೇಶವನ ಸೇರುವನು 3

***


No comments:

Post a Comment