Showing posts with label ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ hayavadana NARAYANA NARAHARIYE HAYAVADANA SWAMI NEE ENAGE. Show all posts
Showing posts with label ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ hayavadana NARAYANA NARAHARIYE HAYAVADANA SWAMI NEE ENAGE. Show all posts

Wednesday 1 September 2021

ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ankita hayavadana NARAYANA NARAHARIYE HAYAVADANA SWAMI NEE ENAGE

 


ನಾರಾಯಣ ನಾರಾಯಣ ನಾರಾಯಣ

ನಾರಾಯಣ ನಾರಾಯಣ ನರಹರಿಯೆ ಪ.


ನಾರಾಯಣ ನರಹರಿಯೆ ಹಯವದನ

ಸ್ವಾಮಿ ನೀ ಎನಗೆ ದಯವಾಗೊ ಅ.ಪ.


ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು

ಆಗಮವ ತಂದು ಅಜಗಿತ್ತೆ

ಆಗಮವ ತಂದು ಅಜಗಿತ್ತೆ ಹಯವದನ

ಆದಿಮೂರುತಿಯೆ ದಯವಾಗೊ 1


ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ

ಪ್ರೇಮದಿ ಸುರರಿಗಮೃತವ

ಪ್ರೇಮದಿ ಅಮೃತವನಿಕ್ಕಿದ ಹಯವದನ

ಸ್ವಾಮಿ ನೀ ಎನಗೆ ದಯವಾಗೊ 2


ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು

ರÀೂಢಿಯ ನೆಗಹಿ ಜಗಕಿತ್ತೆ

ರÀೂಢಿಯ ನೆಗಹಿ ಜಗಕಿತ್ತೆ ಹಯವದನ

ಪ್ರೌಢ ನೀ ಎನಗೆ ದಯವಾಗೊ 3


ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ

ಕುಶಲದಿಂ ಕರುಳ ಮಾಲೆಯ

ಕುಶಲದಿಂ ಮಾಲೆ ಧರಿಸಿದ ಹಯವದನ

ಬಿಸಜಾಕ್ಷ ಎನಗೆ ದಯವಾಗೊ 4


ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ

ವ್ಯೋಮಕ್ಕೆ ಚರಣವ ನೀಡಿದೆ

ವ್ಯೋಮಕ್ಕೆ ಚರಣವ ನೀಡಿದ ಹಯವದನ

ವಾಮನ ಎನಗೆ ದಯವಾಗೊ 5


ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ

ಹಡೆದ ತಂದೆಯ ಮಾತು ಸಲಿಸಿದೆ

ಹಡೆದ ತಂದೆಯ ಮಾತು ಸಲಿಸಿದ ಹಯವದನ

ಒಡೆಯ ನೀ ಎನಗೆ ದಯವಾಗೊ 6


ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ

ಭೂತ ರಾವಣನ ಮಡುಹಿದೆ

ಭೂತ ರಾವಣನ ಮಡುಹಿದೆ ಹಯವದನ

ಖ್ಯಾತ ನೀ ಎನಗೆ ದಯವಾಗೊ 7


ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು

ಮಲ್ಲರೊಡನಾಡಿ ಮಡುಹಿದೆ

ಮಲ್ಲರೊಡನಾಡಿ ಮಡುಹಿದ ಹಯವದನ

ಫುಲ್ಲಾಕ್ಷ ಎನಗೆ ದಯವಾಗೊ 8


ತ್ರಿಪುರರ ಸತಿಯರಿಗುಪದೇಶವನಿಕ್ಕಿ

ತ್ರಿಪುರರನೆಲ್ಲ ಮಡುಹಿದೆ

ತ್ರಿಪುರರನೆಲ್ಲ ಮಡುಹಿದ ಹಯವದನ

ನಿಪುಣ ನೀ ಎನಗೆ ದಯವಾಗೊ 9


ತೇಜಿಯನೇರಿ ರಾಹುತನಾಗಿ ನೀ ಮೆರೆದೆ

ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ

ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ

ಭೋಜ ನೀ ಎನಗೆ ದಯವಾಗೊ 10


ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು

ವೇದದ ಕಥೆಯನರುಹಿದೆ

ವೇದದ ಕಥೆಯನರುಹಿದ ಹಯವದನ

ಮಾಧವ ನೀ ಎನಗೆ ದಯವಾಗೊ 11

***