Showing posts with label ರಾಮ ಶ್ರೀರಾಮ ಸೀತಾರಾಮ kamalanabha vittala. Show all posts

Friday 27 December 2019

ರಾಮ ಶ್ರೀರಾಮ ಸೀತಾರಾಮ ankita kamalanabha vittala

by ನಿಡಗುರುಕಿ ಜೀವೂಬಾಯಿ
ರಾಮ ಶ್ರೀರಾಮ ಸೀತಾರಾಮ ಶ್ರೀರಾಮರಾಮನೆ ರವಿಕುಲಸೋಮಶ್ರೀರಾಮ ಪ 

ರಾಮ ರಾಮ ರಘುರಾಮನೆ ದಶರಥರಾಮನೆ ಗುಣಗಣಧಾಮನೆ ಶ್ರೀರಘು ಅ.ಪ

ಕೌಸಲ್ಯಾದೇವಿಯ ಕಂದನೆ ರಾಮಕೌಶಿಕಯಜÕವ ಕಾಯ್ದ ಶ್ರೀರಾಮಹಿಂಸಿಸಿದ ತಾಟಕಿಯನು ಕೊಂದರಾಮಧ್ವಂಸಮಾಡಿದೆ ಶಿವಧನು ಮುರಿದುರಾಮಸಂಶಯವಿಲ್ಲದೆ ಸೀತೆಕರವಪಿಡಿದುತನ್ನಂಶದ ಪರಶುರಾಮನಿಗೊಲಿದನೆ ಶ್ರೀ 1

ದಶರಥರಾಮ ನೀನರಸನಾಗೆನಲುಅಸುರಾವೇಶದಿ ಕೈಕೆ ವರವ ಯಾಚಿಸಲುಎಸೆವ ಸಿಂಹಾಸನ ತೊರೆದು ಪೊರಮಾಡಲುಶಶಿಮುಖಿಸೀತಾಲಕ್ಷ್ಮಣರ ಕೂಡಿ ಬರಲುಭರತಗೆ ಪಾದುಕೆ ಕೊಡುತಲಿ ಕಳುಹಿಸಿಗುಹನ ಮನ್ನಿಸಿ ವನರಾಜ್ಯದೊಳ್ ಮೆರೆದೆ 2

ವನದೊಳುಮಾಯಾಮೃಗವ ಕಂಡು ಸತಿಯುಮನದಿ ಚಿಂತಿಸಿರಾಮ ತೆರಳೆ ರಕ್ಕಸನುವನಜಾಕ್ಷಿ ಸೀತೆಯ ಕಳವಿನಿಂ ತರಲುವನವನಚರಿಸಿ ಪುಡುಕೆ ಕಂಡು ಕಪಿವರನುಶರಧಿಲಂಘಿಸಿ ಸೀತೆಯನು ಕಂಡು ಹನುಮನುಕುರುಹು ಪಡೆದು ಲಂಕೆ ದಹಿಸುತ ಬರಲು 3

ಸೇತುಬಂಧನ ಮಾಡಿ ಕಪಿಗಳ ಕೂಡಿನೀತಿ ಪೇಳಿದ ವಿಭೀಷಣಗಭಯ ನೀಡಿಭೂತ ರಾವಣನ ದಶಶಿರವ ಚಂಡಾಡಿಸೀತಾಸಹಿತ ರಾಮ ಪುಷ್ಪಕವನೇರಿಆತುರದಿಂದಿಹ ಭರತನಿಗ್ವಾರ್ತೆಯಪ್ರೀತಿಲಿ ಕಳುಹಿದ ಶ್ರಿ ರಘುರಾಮ 4

ಬಂದ ಶ್ರೀರಾಮಚಂದ್ರ ಬಹುಪ್ರೀತಿಯಿಂದಛಂದದಿಂ ಭರತನ ಮನ್ನಿಸಿ ಮುದದಿಂದಕುಂದಣಮಯದ ಸಿಂಹಾಸನ ಚಂದ-ದಿಂದಲೇರುತ ರಾಮ ನಸುನಗೆಯಿಂದಇಂದಿರಾಸೀತಾ ಸಹಿತ ಅಯೋಧ್ಯದಿಬಂದು ಪೊರೆವ ಕಮಲನಾಭ ವಿಠ್ಠಲನು 5
********

*******