Showing posts with label ಕಾಣಬಹುದಕೆ ಕನ್ನಡಿ ಯಾಕೆ ಭಿನ್ನವಿಲ್ಲದೆ mahipati. Show all posts
Showing posts with label ಕಾಣಬಹುದಕೆ ಕನ್ನಡಿ ಯಾಕೆ ಭಿನ್ನವಿಲ್ಲದೆ mahipati. Show all posts

Thursday, 12 December 2019

ಕಾಣಬಹುದಕೆ ಕನ್ನಡಿ ಯಾಕೆ ಭಿನ್ನವಿಲ್ಲದೆ ankita mahipati

ಭೈರವಿ ರಾಗ ದಾದರಾ ತಾಳ

ಕಾಣಬಹುದಕೆ ಕನ್ನಡಿ ಯಾಕೆ ಭಿನ್ನವಿಲ್ಲದೆ ನೋಡಿ
ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ||ಧ್ರುವ||

ಕುಂಭಿನಿಯೊಳು ಘನಹೊಳೆಯುತ ತುಂಬಿ ತುಳುಕುತಲ್ಯಾದೆ
ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ
ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ
ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ ||೧||

ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯ ಚೆನ್ನಾಗಿ
ಒಳಹೊರಗಿದು ಭಾಸುತಿಹುದೆಲ್ಲಾ ಸುಳುವು ಬಲ್ಲಾತ ಯೋಗಿ
ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ
ಹೊಳೆವುತಿಹುದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ ||೨||

ಇಲ್ಲೆವೆ ಎರಡು ಹಾದಿಯ ಕಟ್ಟಿ , ಗುಲ್ಲುಮಾಡದೆ ನೋಡಿ
ಮ್ಯಾಲಿಹ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ
ಅಲ್ಲಿಯೆ ಮನ ತಾಂ ಮನಿಕಟ್ಟಿ ಫುಲ್ಲನಾಭನ ಕೂಡಿ ||೩||
*********