Showing posts with label ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ purandara vittala. Show all posts
Showing posts with label ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ purandara vittala. Show all posts

Friday 6 December 2019

ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ purandara vittala

ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ 

ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ ||ಪ||

ನಂಬಿ ಭಜಿಸಿ ಜನದ ಡಂಭಕತನವ ಬಿಟ್ಟು
ಅಂಬುಜಾಕ್ಷ ಚಾಣೂರಮಲ್ಲಾರಿಯ ||ಅ||

ಚಲ್ಲಣವ ಉಟ್ಟು ತೊಟ್ಟು ಮಲ್ಲಗಟ್ಟ ಬಿಗಿದು ಕಟ್ಟಿ ಗೋವ-
ಳೆಲ್ಲರೊಡನೆ ಕೂಡಿ ಪೊಕ್ಕು ಮಲ್ಲರಂಗವ ಬಲರಾಮ ಕೂಡಿ ಆಡಿ ಕು-
ವಲಯಾಗಜವ ಪಿಡಿದು ಇಂಥಾ
ಬಿಲ್ಲನು ಲಘು ಮಾಡಿದನೆಂಬ ಮಲ್ಲಾರಿಯ ||

ಅಟ್ಟಿಗುಟ್ಟಿ ತೋಳು ತೊಡೆಯ ತಟ್ಟಿ ಬೊಬ್ಬೆ-
ನಿಟ್ಟು ಬೆನ್ನಟ್ಟಿ ಗಗನಕ್ಕೆ ಪುಟ ನೆಗೆಯುತ
ಬಿಟ್ಟ ಮುಷ್ಟಿಕನ (ಮುಷ್ಟಿಗಳ ?) ಗೋಣು ಮೆಟ್ಯತುಳ ರಜಕ
ಜಟ್ಟಿ ಮೆರೆದ ಚಾಣೂರ ಮಲ್ಲಾರಿಯ ||

ಕೊಂಬು ಕೊಳಲು ಜೆಕ್ಕೆ ಢಕ್ಕೆ ಬೊಬ್ಬಿಳಿಯಲ್ಲಿ ಬಾರಿಸುತ್ತ
ಭೊಂ ಭೊಂ ಭೊಂ ಭೊಂಭೊಂ ಎಂಬ
ಶಂಬರನ್ನ ರಭಸದಿ ಮಾಯವಿಡಲು ಅಂಬುಧಿಯೊಳಗಲ್ಲಾಡಿ
ಅಂಬುಜಾಕ್ಷ ಚಾಣೂರಮಲ್ಲಾರಿಯ ||

ಮಂಡೆ ಗಲ್ಲವ ಪಿಡಿದು ದೈತ್ಯ ಬಿಡದೆ ಬಲದ
ದೊಡ್ಡ ತಾಂಡವ ಚಾಣೂರ ಶಿರವ ಕಡಿಯುತ
ಖಂಡ ತುಂಡ ಮಾಡಿ ಅಸುರ
ಕಂಡು ಹಾ ಹಾ ಎನಲು ಜಗದಿ ಮೆರೆದ ಚಾಣೂರ ಮಲ್ಲಾರಿಯ ||

ಮಾವನ ಶಿರವ ಕಡಿದು ದೇವಕಿಗೆ ಸಂತೋಷವಿತ್ತ
ದೇವ ಉಗ್ರಸೇನಗೊಲಿದು ಪಟ್ಟಗಟ್ಟಿದ
ದೇವತೆಯರು ಗಗನದಲ್ಲಿ ಪೂವಿನ ಮಳೆಗರೆಯಲಾಗಿ
ದೇವ ಪುರಂದರವಿಠಲರಾಯ ತಾನು ಮೆಚ್ಚಿದ ||
***

pallavi

nambi bhajisirO janaru nambi bhajisirO

anupallavi

nambi bhajisi janada Dambhaka tanava biTTu ambujAkSa cANuramallAriya

caraNam 1

callaNava uTTu toTTu mallagaTTa bigidu kaTTi gOvaLellaroDane kUDi pokku mallarangava
balarAma kUDi Adi Adi kuvalayAgajava biDidu inthA billanu laghu mADidanemba mallAriya

caraNam 2

aTTiguTTi tOLu toDeya taTTi bobbeniTTu bennaTTi gaganakke puTa negeyuta
biTTa muSTigaLa gONu meTyaduLa rajaga jaTTi mereda cANUra mallAriya

caraNam 3

kombu koLalu jekke Dhakke bobbiLiyalli bAisutta bhom bhom bhom bhombhom emba
shambaranna rabhasadi mAyaviDalu ambudhiyoLagallADi ambujAkSa cANUra mallAriya

caraNam 4

maNDe gallava piDidu daitya biDade balada doDDa tANDava cANUra shirava kaDiyuta
gaNDa tuNDa mADi asura kaNDu hA hA enalu jagadi mereda cANUra mallAriya

caraNam 5

mAvana shirava kaDidu dEvakige santOSavitta dEva ugrasEnagolidu paTTa kaTTida
dEvateyaru gaganadalli pUvina maLe gareyalAgi dEva purandara viTTalarAya tAnu meccida
***