by ಪ್ರಸನ್ನವೆಂಕಟದಾಸರು
ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ ಪ.
ಮೂಜಗದೊಳಾರು ನಿನಗೆಣೆಯೆ ಋಜುಗಣಪತಿ ಸರೋಜಭವಪದ ಗಮ್ಯ ರಮ್ಯಭೂಜಾತೆಯಳಶೋಕಬಿಡಿಸಿದ ಬಲಾಧಿಕ ಬಿಡೌಜಾರಿಪಿತ ಹೃದಯನೊದೆದೆ 1
ಲಾಕ್ಷಾಗೃಹದಿ ಧರ್ಮಜರ ಹೊರೆದು ಕಿಮ್ರ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ 2
ಉನ್ಮತ್ತಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆನಿರಯತಪ್ಪಿಸಿದೆ ಪ್ರಸನ್ನವೆಂಕಟನಾಥ ಪ್ರೀತ 3
*******