Showing posts with label ಇದೇ ರಾಮನಿಧಿ ನೋಡು ಎದುರಿಗಿರುತಿರೆ vijaya vittala. Show all posts
Showing posts with label ಇದೇ ರಾಮನಿಧಿ ನೋಡು ಎದುರಿಗಿರುತಿರೆ vijaya vittala. Show all posts

Wednesday, 16 October 2019

ಇದೇ ರಾಮನಿಧಿ ನೋಡು ಎದುರಿಗಿರುತಿರೆ ankita vijaya vittala

ವಿಜಯದಾಸ
ಇದೇ ರಾಮನಿಧಿ ನೋಡು ಎದುರಿಗಿರುತಿರೆ
ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ ಪ

ಭೂರಿ ಭೋಜನ
ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ
ಸೂರ್ಯ ಕಿರಣ ತೋರುವಾ ಪ್ರಭೆ
ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ 1

ಅಷ್ಟದಳದ ಮಂಟಪದ ಪೆಟ್ಟಿಗೆಯಲೀ
ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ
ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ
ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ 2

ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ-
ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ
ಶಂಖ ತಾಳ ಮದ್ದಳೆಯು ಝೇಂಕೃತಿಯಿಂದಾ
***********