Showing posts with label ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು gurumahipati. Show all posts
Showing posts with label ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು gurumahipati. Show all posts

Wednesday 1 September 2021

ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ 


ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 

ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 

ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 

ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5

****