Showing posts with label ವರದೇ ಕಾರುಣ್ಯ ಶರಧೇ jagannatha vittala. Show all posts
Showing posts with label ವರದೇ ಕಾರುಣ್ಯ ಶರಧೇ jagannatha vittala. Show all posts

Saturday, 14 December 2019

ವರದೇ ಕಾರುಣ್ಯ ಶರಧೇ ankita jagannatha vittala

ಜಗನ್ನಾಥದಾಸರು
ವರದೇ ಕಾರುಣ್ಯ ಶರಧೇ
ಕರೆದೆನ್ನ ತವ ಸನ್ನಿಧಿಯಲಿಟ್ಟು ಪೊರೆಯೇ ಪ

ವರದೆ ವರದೇ ಎಂದು ಕರೆದ ಮಾತ್ರದಲಿ ವಗ್ದುರಿತಗಳ
ಪರಿಹರಿಸಿ ಪೊರೆವ ನೀನು
ಕರಣ ಶುದ್ಧಿಯಲಿ ಸಂದರುಶನಭಿವಾದನವ
ವಿರಚಿಸುವ ಮಾನವಗೆ ಪರಮ ಸೌಖ್ಯವನೀವೆ 1

ಸ್ನಾನ ಸಂಧ್ಯಾನ ಜಪ ಧ್ಯಾನಾರ್ಚನೆಯ ಮಾಳ್ಪ
ಮಾನವರಿಗನುದಿನದಲೇನು ಫಲವೋ
ಸಾನುರಾಗದಿ ಒಲಿದು ನೀನಿತ್ತು ಪಾಲಿಸಿದೆ
ಆನರಿಯೆ ವಾರಿನಿಧಿ ರಾಣಿ ಕಲ್ಯಾಣಿ 2

ಕರುಣಿಸೆನಗಿದನೆ ವರ ವರವ ಬೇಡುವೆ ನಿನಗೆ
ಹರಿಗುರುಗಳಲಿ ಭಕುತಿ ಪರಮ e್ಞÁನ
ಮರುತಾಂತರಾತ್ಮಕ ಜಗನ್ನಾಥ ವಿಠಲ ಒಂ
ದರೆಘಳಿಗೆ ಬಿಡದೆ ಪೊಂದಿರಲಿ ಮನ್ಮನದಿ 3
********