ಏನೇನು ಭಯವಿಲ್ಲ ನಮಗೆ
ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ
ಜೋಡು ಕರ್ಮದಿ ಬಿದ್ದುಕೇಡು ಲಾಭಕೆ ಸಿಲ್ಕಿ
ಮಾಡಿದ್ದೆ ಮಾಡುತ ಮೂಢನಾಗಿ
ರೂಢಿವಳಗೆ ತಿರಿಗ್ಯಾಡುವ ಅe್ಞÁನಿ
ಕೋಡಗನ್ನ ಸಿಂಹ ಮಾಡಿದ ಗುರುವಿರೆ 1
ಆವಾನು ದಯಮಾಡೆ ದೇವನು ವಲಿವನು
ಆವನ ನಂಬಲು ದೇವಗಣಾ
ಕಾವಲಿಗಳಾಗಿ ಕಾವದು ಅಂತ
ಕೋವಿದಾಗ್ರಣಿ ಗುರು ರಘುಪತಿ ದಯವಿರೆ 2
ಕರವೆಂಬೊ ಲೇಖನದ್ವಾರದಿಂದ ನಮ್ಮ ಶಿರಿಗೋವಿಂದ ವಿಠಲ
ರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದು
ತಿರುಗುವ ಗುರುಕೃಪೆ ನೆರಳಿರೆ 3
****