..
kruti by Srida Vittala Dasaru Karjagi Dasappa
ನೋಡು ನೋಡು ನಾರೀಮಣಿಯೆ ಪ
ನೋಡು ನೋಡು ನಿನ್ನಾ ಕಣ್ಮನ ದಣಿಯಾ ಅ.ಪ.
ಮುದ್ದು ಸೂಸುವ ಸಲೆ ಮುಗುಳ್ನಗೆ ಮೊಗವಾ
ತಿದ್ದಿದ ಕಸ್ತೂರಿ ತಿಲಕದ ಫಣಿಯಾ 1
ಸಾರ ಗಂಭೀರ ಶೃಂಗಾರ ವಿಹಾರಾ
ಚಾರು ಸೌಂದರ್ಯವೈಯ್ಯಾರ ಸುಗುಣಿಯಾ 2
ಶ್ರೀದವಿಠ್ಠಲ ಸಾಕ್ಷಾತ್ತ್ರಿಜಗನ್ಮಯಾ
ಇಂದ್ರಶರಾ ಜಗನ್ಮೋಹನ ಖಣಿಯಾ 3
***