Showing posts with label ಬಿಡದೆ ಯಾಚಿಸಿ ಬೇಡುವೆನು ಶೌರಿ ನಿನ್ನಂಘ್ರಿ ಭಜಕರ kamalanabha vittala. Show all posts
Showing posts with label ಬಿಡದೆ ಯಾಚಿಸಿ ಬೇಡುವೆನು ಶೌರಿ ನಿನ್ನಂಘ್ರಿ ಭಜಕರ kamalanabha vittala. Show all posts

Thursday 5 August 2021

ಬಿಡದೆ ಯಾಚಿಸಿ ಬೇಡುವೆನು ಶೌರಿ ನಿನ್ನಂಘ್ರಿ ಭಜಕರ ankita kamalanabha vittala

 ..

kruti by Nidaguruki Jeevubai


ಬಿಡದೆ ಯಾಚಿಸಿ ಬೇಡುವೆನು ಶೌರಿ ನಿನ್ನಂಘ್ರಿ ಭಜಕರ

ಅಡಿಗಳನು ಧ್ಯಾನಿಸುವ ಮತಿ ಕೋರಿ ಪ


ಮೃಡ ಪುರಂದರರೊಡೆಯ ಶ್ರೀಹರಿ

ಕಡಲಶಯನನ ಬಿಡದೆ ಭಜಿಪರ

ಸಡಗರದಿ ಸನ್ಮಾರ್ಗ ತೋರುವ

ಬಡವರ ಆಧಾರಿ ನರಹರಿ ಅ.ಪ


ನಿನ್ನ ದಾಸರ ಸಂಗದೊಳಿರಿಸೆನ್ನ ಬೇಡುವೆನು ನಿನ್ನ

ನಿನ್ನ ನಾಮಸ್ಮರಣೆ ಅನುದಿನ

ನಿನ್ನ ಚರಣವ ಭಜಿಪ ಭಕ್ತರನು ಕೊಂಡಾಡುವಂಥ ಅ-

ಚ್ಛಿನ್ನ ಭಕ್ತರ ಕೂಟದಲಿರಿಸೆನ್ನ

ಸನ್ನುತಾಂಗನೆ ಸರ್ವವ್ಯಾಪಕ

ನಿನ್ನ ಮೊರೆ ಹೊಕ್ಕಿರುವೆ ಪಾಲಿಸು

ಪನ್ನಗಾದ್ರಿವಾಸ ವೆಂಕಟ ಆ-

ಪನ್ನ ಜನರನು ಪೊರೆವ ಕರುಣಿಯೆ 1


ಮಡುವಿನೊಳು ಗಜ ಮೊರೆಯನಿಡುತಿರಲು

ನೀ ಕೇಳಿ ತ್ವರದೊಳು

ಬಿಡದೆ ರಕ್ಷಿಸಿ ಪೊರೆದ ಕರುಣಾಳು

ಬಡವ ವಿಪ್ರಗೆ ಒಲಿದೆ ಕ್ಷಿಪ್ರದೊಳು ಸೌಭಾಗ್ಯವಿತ್ತೆ

ಹುಡುಗ ತಪವಿರೆ ಅಂದು ಅಡವಿಯೊಳು

ತಡೆಯದಲೆ ನೀನೊಲಿದೆ ಭಕುತಿಗೆ

ಒಡೆಯರೈವರ ಮಡದಿ ಮೊರೆ ಕೇಳಿ

ಬಿಡದೆ ಅಕ್ಷಯವೆಂದು ಸಲಹಿದೆ

ದೃಢ ಭಕುತರನು ಬಿಡದೆ ಪೊರೆಯುವೆ 2


ರಂಗನಾಥ ನಿನ್ನಂಘ್ರಿ ಕಮಲಗಳ ಭಜಿಸುವವರ ಭವ

ಹಿಂಗಿಸುತ ಪೊರೆದಂಥ ಚರಿತೆಗಳ

ಸಂಗರಹಿತನೆ ಬಿಡಿಸು ಬಂಧಗಳ ಸಲಹೆಂದು ಪ್ರಾರ್ಥಿಪೆ

ಅಂಗಜನಪಿತ ತರಿದೆನ್ನಪರಾಧ

ಮಂಗಳಾಂಗ ಪ್ಲವಂಗ ವತ್ಸರ

ಗಂಗಾಜನಕ ನಿನ್ನಂಘ್ರಿ ಭಜಕರ

ಹಿಂಗದಲೆ ಪಾಲಿಸುತ ಪೊರೆ ಕೃಪಾ-ಪಾಂಗ ಕಮಲನಾಭ ವಿಠ್ಠಲನೆ 3

***