ಕಾಖಂಡಕಿ ಶ್ರೀ ಕೃಷ್ಣದಾಸರು
ನೆಲಿಗೆ ಬಾರದು ಗುರುವೇ ಮನವಿದು ಪ
ಒಳ್ಳೆಯವರಾ ನಡೆ ಕಂಡು | ಎಳ್ಳನಿತು ನಾಚದು | ಖುಳ್ಳರ ಮನದಲ್ಲಿ ಬೆರೆಸುವದು 1
ಚರಟ ಮಾತುಗಳಲ್ಲಿ ಹರುಷವ ಬಡುವರು | ಪರಮ ಸದ್ಭೋಧದಲ್ಲಿ ತೊಳಗುವದು 2
ಏನ ಹೇಳಿದರೇನು ಜ್ಞಾನವ ಕೊಳ್ಳದು | ತಾನೆ ತನ್ನಿಚ್ಛೆಯಲಿ ತಿರುಗುವದು 3
ಸ್ಥಿರವಾಗುವ ಪರಿಯಲಿ ಕರುಣವ ಮಾಡುವುದು | ಸರಣೆ ಸರಪಳಿ ನಿಕ್ಕಿ ನಿಲಿಸುವುದು 4
ಸನ್ನುತ ಮಹಿಪತಿ ಚಿನ್ನನ ಹೊರೆವದು | ಧನ್ಯಗೈಸಲು ಮನವ ತಿದ್ದುವದು 5
***