Showing posts with label ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ jagannatha vittala. Show all posts
Showing posts with label ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ jagannatha vittala. Show all posts

Saturday, 14 December 2019

ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ankita jagannatha vittala

ಜಗನ್ನಾಥದಾಸರು
ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ

ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ.

ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು
ಅಕಳಂಕ ನಾಮರೂಪದಲಿ ಕರೆಸಿ
ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ
ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1

ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ
ಸುರರು ದೀನರುದ್ಧರಿಸುವುದು ದಯದಿಂದ ನಿರುತಾ 2

ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ
ಶರ್ವಾದಿಸುರರು ಪ್ರಾರ್ಥಿಸುತಿಪ್ಪರು
ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ
ಗರ್ವಿಸಿದ ದಾನವರ ಗಣವ ಸಂಹರಿಪೆ 3

ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ
ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ
ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4

ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ
ಭೀಷಣಗೆ ಲಂಕಾಧಿಪತ್ಯವಿತ್ತೇ
ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5
*******